ದೆಹಲಿಯಲ್ಲಿ ಬಸವ ಜಯಂತಿ : ಸಮಾಜದ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಹೋರಾಡಲು ಪ್ರಧಾನಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ
Basavann-2
ನವದೆಹಲಿ, ಏ.29-ದೇಶದಲ್ಲಿ ತಾಂಡವವಾಡುತ್ತಿರುವ ಅನಿಷ್ಟ ಪದ್ದತಿಗಳನ್ನು ನಿರ್ಮೂಲನೆ ಮಾಡುವ ವ್ಯಕ್ತಿಗಳು ಹುಟ್ಟಬೇಕಿದೆ ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ ಮತ್ತು ದೌರ್ಜನ್ಯಗಳನ್ನು ಹತ್ತಿಕ್ಕಲು ವನಿತೆಯರೇ ಮುಂದೆ ಬಂದು ಹೋರಾಡಬೇಕು ಎಂದು ಕರೆ ನೀಡಿದ್ದಾರೆ.   ತ್ರಿ ವಳಿ ತಲಾಕ್ ವಿರುದ್ಧ ಮುಸ್ಲಿಂ ಸಮುದಾಯ ಹೋರಾಟ ನಡೆಸುತ್ತಿದೆ. ಈ ಬಗ್ಗೆ ರಾಷ್ಟ್ರಮಟ್ದದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಈ ವಿಷಯದಲ್ಲಿ ರಾಜಕಾರಣ ಮಾಡದೇ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವುದು ಅಗತ್ಯವಾಗಿದೆ. ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಲು ಅವರಿಗೆ ಅವಕಾಶ ಇದೆ. ವನಿತೆಯರು ಹಕ್ಕುಗಳ ರಕ್ಷಣೆಗೆ ಎಲ್ಲರೂ ಮುಂದೆ ಬರುವಂತೆ ಅವರು ಸಲಹೆ ಮಾಡಿದ್ದಾರೆ.ರಾಜಧಾನಿಯ ವಿಜ್ಞಾನಭವನದಲ್ಲಿ ಇಂದು ಬಸವ ಜಯಂತಿ ಪ್ರಯಕ್ತ ಕ್ರಾಂತಿಯೋಗಿಯ ಪುತ್ಥಳಿಗೆ ಮಾಲಾರ್ಪಣೆ ಮಾಡಿ, 23 ಭಾಷೆಗಳಿಗೆ ಅನುವಾದಗೊಂಡ 12ನೇ ಶತಮಾನದ 173 ಶರಣರ 2,500 ವಚನಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಓಂ ಗುರು ಬಸವ ಲಿಂಗಾಯ ನಮ: ಎಂದು ಬಸವ ನಾಮಸ್ಮರಣೆಯೊಂದಿಗೆ ಭಾಷಣ ಆರಂಭಿಸಿ, ದೇಶದ ಜನರಿಗೆ ಬಸವ ಜಯಂತಿ ಶುಭಾಶಯ ಕೋರಿದರು. ಸಮಾಜ ಸುಧಾರಕ, ಮಹಾ ಮಾನವತಾವಾದಿ ಹಾಗೂ ಕ್ರಾಂತಿಯೋಗಿ ಬಸವಣ್ಣನವರ ವಚನಗಳು ಜಗತ್ತಿನ ಮೂಲೆ ಮೂಲೆಗಳಿಗೂ ಪಸರಿಸಬೇಕಿದೆ ಎಂದು ಪ್ರಧಾನಿ ಆಶಯ ವ್ಯಕ್ತಪಡಿಸಿದರು.
ಭಾರತದ್ದು ಗುಲಾಮಗಿರಿಯ ಅಥವಾ ಸೋಲಿನ ಇತಿಹಾಸವಲ್ಲ. ಸಕಲ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ನಮ್ಮ ದೇಶ ಮಾದರಿಯಾಗಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಬಸವಣ್ಣನವರಂಥ ಮಹಾಪುರುಷರು ಅವತರಿಸಿದ್ದಾರೆ ಎಂದು ಮೋದಿ ಹೇಳಿದರು.

Basavanna--01
ಬಸವಣ್ಣನವರು ಸಮಾಜ ಸುಧಾರಣೆ ಮತ್ತು ಕಾಯಕ ತತ್ತ್ವ ಬಿತ್ತಿದ ಕರ್ಮಯೋಗಿ, ಪ್ರಜಾಪ್ರಭುತ್ವ ಕಲ್ಪನೆ ಸಾರಿದ ಭಕ್ತಿ ಭಂಡಾರಿ. ಅವರು ಎಲ್ಲರನ್ನೂ ಸಮನವಾಗಿ ನೋಡುತ್ತಿದ್ದರು. ಮಹಿಳಾ ಸಮಾನತೆಗೆ ಒತ್ತು ನೀಡಿದ ವಿಶ್ವ ಗುರು ಎಂದು ವ್ಯಾಖ್ಯಾನಿಸಿದ ಅವರು, ಬಸವೇಶ್ವರರ ಅನುಭವ ಮಂಟಪವೇ ವಿಶ್ವದ ಪ್ರಥಮ ಸಂಸತ್ ಎಂದು ಅವರು ಹೇಳಿದರು.  ಹನ್ನೆರಡನೇ ಶತಮಾನದಲ್ಲೇ ಅನುಭವ ಮಂಟಪದ ಮೂಲಕ ಸಮಾಜದಲ್ಲಿ ಸಮಾನತೆ ಸಾರಿದ ಮಹಾ ಮಾನವತಾವಾದಿ ಬಸವಣ್ಣನವರು ಎಂದು ಮೋದಿ ಬಣ್ಣಿಸಿದರು.
ಇಂಥ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯಬೇಕಿದೆ. ಬಸವೇಶ್ವರರ ವಚನಗಳನ್ನು ವಿಶ್ವದ ಮೂಲೆ ಮೂಲೆಗೂ ತಲುಪಿಸಬೇಕಿದೆ. ಈ ನಿಟ್ಟಿನಲ್ಲಿ 2,500 ವಚನಗಳ ಅನುವಾದ ಶ್ಲಾಘನೀಯ ಕಾರ್ಯ ಎಂದು ಅವರು ಮೆಚ್ಚುಗೆ ಸೂಚಿಸಿದರು.  ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಗಣಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ ಮೊದಲಾದ ಗಣ್ಯರು ಸಮಾರಂಭದಲ್ಲಿ ಮಾತನಾಡಿ ಬಸವಣ್ಣನವರ ಸಮಾಜ ಸುಧಾರಣೆಗಳ ಗುಣಗಾನ ಮಾಡಿದರು.
Facebook Comments

Sri Raghav

Admin