ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, 1800 ಶಾಲೆಗಳಿಗೆ ರಜೆ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Smog
ನವದೆಹಲಿ, ನ.5-ಭಾರತದಲ್ಲಿ ಇದುವರೆಗೂ ಕಂಡು ಕೇಳರಿಯದ ಭೀಕರ ಪರಿಸರ ಮಾಲಿನ್ಯದಿಂದ ರಾಜಧಾನಿ ನವದೆಹಲಿ ಹೈರಾಣಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 1,800 ಪ್ರಾಥಮಿಕ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ.  ಮೊದಲೇ ವಾಯು ಮಾಲಿನ್ಯದಿಂದ ತತ್ತರಿಸಿದ್ದ ದೆಹಲಿಯಲ್ಲಿ ದೀಪಾವಳಿ ನಂತರ 12 ರಿಂದ 13 ಪಟ್ಟು ಹೆಚ್ಚಿಗೆ ಪರಿಸರ ಕಲುಷಿತಗೊಂಡಿದ್ದು, ಇಡೀ ರಾಜಧಾನಿ ಮೇಲೆ ದಟ್ಟ ಹೊಗೆ ಆವರಿಸಿದೆ.  ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದನ್ನು ತಡೆಯಲು 1800 ಪ್ರಾಥಮಿಕ ಶಾಲೆಗಳನ್ನು ಇಂದು ಬಂದ್ ಮಾಡಲು ಆದೇಶಿಸಲಾಗಿದೆ. ಈ ಶಾಲೆಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ದೆಹಲಿಯ ನಿವಾಸಿಗಳಿಗೆ ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ.

Smog-1

ದೀಪಾವಳಿ ಬಳಿಕ ಪರಿಸರ ಮಾಲಿನ್ಯದಿಂದ ದೆಹಲಿಯ ಅನೇಕ ನಾಗರಿಕರಲ್ಲಿ ಉಸಿರಾಟದ ಸಮಸ್ಯೆ, ಅಲರ್ಜಿ ಮೊದಲಾದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದೆ.

► Follow us on –  Facebook / Twitter  / Google+

Smog-2

Facebook Comments

Sri Raghav

Admin