ದೆಹಲಿಯಲ್ಲಿ ಮೋದಿ ಮತ್ತು ಅಮಿತ್ ಷಾ ಜೊತೆ ಯೋಗಿ ಆದಿತ್ಯನಾಥ್ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Modi-And-Yogo

ನವದೆಹಲಿ, ಮಾ.21-ರಾಜಧಾನಿ ನವದೆಹಲಿಗೆ ಆಗಮಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೊಂದಿಗೆ ರಾಜ್ಯ ರಾಜಕಾರಣದ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದರು.   ಲಕ್ನೋದಿಂದ ದೆಹಲಿಗೆ ಆಗಮಿಸಿದ ಯೋಗಿ, ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸಿದರು. ಆನಂತರ ಉತ್ತರಪ್ರದೇಶದ ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮತ್ತು ರಾಜ್ಯ ಘಟಕದ ಬಲವರ್ಧನೆ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಿದರು.   ಮುಖ್ಯಮಂತ್ರಿಗಳಾದ ಮನೋಹರ್ ಪರಿಕ್ಕರ್ (ಗೋವಾ), ಬಿರೇನ್ ಸಿಂಗ್(ಮಣಿಪುರ) ಹಾಗೂ ತ್ರಿವೇಂದ್ರ ಸಿಂಗ್ ರಾವತ್ (ಉತ್ತರಾಖಂಡ್) ಅವರೂ ಸಹ ಸಭೆಯಲ್ಲಿ ಭಾಗವಹಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin