ದೆಹಲಿ ಅಧಿಕಾರ ವಿವಾದ : ಸಂವಿಧಾನ ಪೀಠ ಸ್ಥಾಪನೆಗೆ ಸುಪ್ರೀಂ ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

supreme-ocurt

ನವದೆಹಲಿ, ಸೆ.5-ಲೆಫ್ಟಿನೆಂಟ್ ಗೌರ್ನರ್ ಅವರೇ ದೆಹಲಿಯ ಆಡಳಿತಾತ್ಮಕ ಮುಖ್ಯಸ್ಥರು ಎಂಬ ಹೈಕೋರ್ಟ್ ಆದೇಶದ ವಿರುದ್ಧ ಎಎಪಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಗಾಗಿ ಐವರು ನ್ಯಾಯಾಧೀಶರ ಪೀಠವೊಂದನ್ನು ರಚಿಸಲು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು, ಈ ಪ್ರಕರಣದ ಬಗ್ಗೆ ನ್ಯಾಯನಿರ್ಣಯಕ್ಕಾಗಿ ಸಂವಿಧಾನ ಪೀಠೆವೊಂದನ್ನು ತ್ವರಿತವಾಗಿ ರಚಿಸಬೇಕೆಂಬ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರದ ಮನವಿಯನ್ನು ಪುರಸ್ಕರಿಸಿದೆ.

Facebook Comments

Sri Raghav

Admin