ದೆಹಲಿ ಏರ್‍ಪೋರ್ಟ್‍ನಲ್ಲಿ ಶಂಕಿತ ಉಗ್ರರ ಸಂಚಾರ, ಹೈ ಅಲರ್ಟ್ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Delhi-Airport-01

ನವದೆಹಲಿ,ಜ.18- ಸೇನಾ ಸಮವಸ್ತ್ರ ದಲ್ಲಿದ್ದ ಏಳು ಮಂದಿ ಶಂಕಿತ ಉಗ್ರರು ಪತ್ತೆಯಾದ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದ್ದು , ತೀವ್ರ ಶೋಧ ಮುಂದುವರೆದಿದೆ. ವಿಮಾನ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ಮಿಲಟರಿ ಯೂನಿಫಾರಂನಲ್ಲಿದ್ದ ಏಳು ಮಂದಿ ಸಂಶಯಾಸ್ಪದವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ದೆಹಲಿ ಏರ್‍ಪೋರ್ಟ್‍ನಲ್ಲಿ ಭದ್ರತಾ ಸಿಬ್ಬಂದಿ ಹೈ ಅಲರ್ಟ್ ಘೋಷಿಸಿ ತೀವ್ರ ಶೋಧ ಮುಂದುವರೆಸಿದೆ.  ಸಮವಸ್ತ್ರ ಧರಿಸಿ ಸೇನಾನೆಲೆಗಳು ಮತ್ತು ಸಾರ್ವಜನಿಕ ಸ್ಥಳಗಳ ಮೇಲೆ ಉಗ್ರಗಾಮಿ ಗಳು ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ರಾಜಧಾನಿ ದೆಹಲಿಯಲ್ಲಿ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಎರಡು ತಿಂಗಳಿಂದಷ್ಟೇ ಮುಂಬೈನ ಹಡಗುಕಟ್ಟೆ ಬಳಿ ಸೇನಾ ಸಮವಸ್ತ್ರದಲ್ಲಿದ್ದ ಇಬ್ಬರು ಉಗ್ರರು ಕಂಡುಬಂದರು ಎಂದು ಶಾಲಾ ಬಾಲಕರು ಪೊಲೀಸರಿಗೆ ತಿಳಿಸಿದ್ದರು. ಆನಂತರ ಹೆಲಿಕಾಪ್ಟರ್ ಮೂಲಕ ಇಡೀ ವಾಣಿಜ್ಯ ರಾಜಧಾನಿ ಸುತ್ತ ಶಂಕಿತ ಉಗ್ರರಿಗಾಗಿ ಶೋಧ ನಡೆಸಲಾಗಿತ್ತು.  ಉರಿ ಸೇರಿದಂತೆ ಕಾಶ್ಮೀರದ ವಿವಿಧೆಡೆ ಇತ್ತೀಚೆಗೆ ನಡೆದ ದಾಳಿ ಪ್ರಕರಣಗಳಲ್ಲೂ ಮಿಲಿಟರಿ ಸಮವಸ್ತ್ರಧಾರಿಗಳ ದುಷ್ಕøತ್ಯಗಳು ಕಂಡುಬಂದಿದ್ದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin