ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲು, ಆಪ್ ಶಾಸಕಿ ಅಲಕಾ ಲಂಬಾ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

alka-lamba

ನವದೆಹಲಿ, ಏ.26-ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಮ್ ಆದ್ಮಿ ಪಕ್ಷವು ಹೀನಾಯ ಪರಾಭವಗೊಂಡ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಶಾಸಕಿ ಸ್ಥಾನಕ್ಕೆ ಅಲಕಾ ಲಂಬಾ ರಾಜೀನಾಮೆ ನೀಡಿದ್ದಾರೆ.   ತಮ್ಮ ಕ್ಷೇತ್ರದಲ್ಲಿ ಎಎಪಿ ಪರಾಭವಗೊಂಡಿದೆ. ಈ ಕಾರಣಕ್ಕಾಗಿ ಸೋಲಿನ ನೈತಿಕ ಹೊಣೆ ಹೊತ್ತು ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದ ಸದಸ್ಯತ್ವ ಸ್ಥಾನಕ್ಕೆ ಹಾಗೂ ಪಕ್ಷದಲ್ಲಿ ಹೊಂದಿರುವ ಎಲ್ಲ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ಅಲಕಾ ಲಂಬಾ ಹೇಳಿದ್ಧಾರೆ.   ಆದಾಗ್ಯೂ ಪಕ್ಷದ ಬಲವರ್ಧನೆಗಾಗಿ ನಾನು ಶ್ರಮಿಸುವುದನ್ನು ಮುಂದುವರಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  Facebook Comments

Sri Raghav

Admin