ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಜಲಪ್ರಳಯದಿಂದ ಲಕ್ಷಾಂತರ ಜನ ಅತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Rain-a02

ನವದೆಹಲಿ,ಆ.31– ರಾಜಧಾನಿ ನವದೆಹಲಿ ಮತ್ತು ಉತ್ತರಪ್ರದೇಶದ ವಿವಿಧೆಡೆ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಾಜಸ್ಥಾನ, ಛತ್ತೀಸ್ಘಡ ಮತ್ತು ಬಿಹಾರ ರಾಜ್ಯಗಳಲ್ಲಿ ಮಳೆ ಆರ್ಭಟ ಕಡಿಮೆಯಾಗಿದೆ.   ದೆಹಲಿಯಲ್ಲಿ ಇಂದು ಮುಂಜಾನೆಯಿಂದ ಗುಡುಗು ಸಹಿತ ಭಾರೀ ಮಳೆ ಸುರಿಯಿತು. ದಿನನಿತ್ಯದ ಚಟುವಟಿಕೆಗೆ ಸಜ್ಜಾಗುತ್ತದ್ದ ರಾಜಧಾನಿಯ ಜನರಿಗೆ ಬೆಳಗ್ಗೆಯೇ ಮಳೆಯ ಆರ್ಭಟ ತೊಂದರೆ ಎದುರಾಯಿತು.  ಮಂಡಿ ಹೌಸ್, ಆರ್ಕೆಪುರಂ ಮತ್ತು ಗುರುಗ್ರಾಮ್ ಪ್ರದೇಶದಲ್ಲಿ ವರುಣನ ಅಬ್ಬರ ಹೆಚ್ಚಾಗಿತ್ತು. ಮಳೆಯಿಂದಾಗಿ ಗುರುಗಾಂವ್ ಮತ್ತು ವಸಂತ್ ಕುಂಜ್ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.

ಪ್ರತಿಕೂಲ ಹವಾಮಾನದಿಂದಾಗಿ ವಿಮಾನಗಳ ಹಾರಾಟಗಳು ವಿಳಂಬಗೊಂಡವು. ಇನ್ನೂ ಎರಡು ಮೂರು ದಿನ ದೆಹಲಿಯಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಉತ್ತರಪ್ರದೇಶದ ವಿವಿಧೆಡೆ ಮಳೆಯ ಆರ್ಭಟ ಮುಂದುವರೆದಿದೆ. ವಾರಣಾಸಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ.  ಜಲಪ್ರಳಯ ಮತ್ತು ನೆರೆ ಹಾವಳಿಯಿಂದ ತತ್ತರಿಸಿದ್ದ ರಾಜಸ್ಥಾನ, ಛತ್ತೀಸ್ಘಡ ಮತ್ತು ಬಿಹಾರ ರಾಜ್ಯಗಳಲ್ಲಿ ಮಳೆ ಆರ್ಭಟ ಕಡಿಮೆಯಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin