ದೆಹಲಿ ಮೆಟ್ರೋ ಸ್ಟೇಷನ್‍ನಲ್ಲಿ ಶೂಟೌಟ್, ಕ್ರಿಮಿನಲ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Delhi-Metro-Station

ನವದೆಹಲಿ, ಫೆ.6 –ಕುಖ್ಯಾತ ಅಪರಾಧಿಗಳು ಮತ್ತು ಪೊಲೀಸರ ನಡುವೆ ಇಂದು ಮುಂಜಾನೆ ದಕ್ಷಿಣ ದೆಹಲಿಯ ಮೆಟ್ರೋ ರೈಲು ನಿಲ್ದಾಣದಲ್ಲಿ ಗುಂಡಿನ ಚಕಮಕಿ ನಡೆದು ಕೆಲಕಾಲ ಆತಂಕ ಮತ್ತು ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತು. ನಂತರ ಪೊಲೀಸರು ಮೇಲುಗೈ ಸಾಧಿಸಿ ಅಕ್ಬರ್ ಎಂಬ ದುಷ್ಕರ್ಮಿಯನ್ನು ಬಂಧಿಸಿದ್ದಾರೆ.   ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈತನ ತಲೆಗೆ 25,000 ರೂ. ನಗದು ಬಹುಮಾನ ಘೋಷಿಸಲಾಗಿತ್ತು. ಅಕ್ಬರ್ ಮೆಟ್ರೋ ರೈಲಿನ ಮೂಲಕ ಬೇರೆ ಸ್ಥಳಕ್ಕೆ ಪರಾರಿಯಾಗುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ನೆಹರು ಪ್ಲೇಸ್ ಬಳಿ ಬಲೆ ಬೀಸಿದ್ದರು.

ಮೆಟ್ರೋ ನಿಲ್ದಾಣದ ಬಳಿ ಬೆಳಿಗ್ಗೆ 5.30ಕ್ಕೆ ತನ್ನ ಸಹಚರರೊಂದಿಗೆ ಆಗಮಿಸಿದ್ದ ಆತ ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದ. ಈ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದಾಗ ಕೆಲಕಾಲ ಎನ್‍ಕೌಂಟರ್ ನಡೆಯಿತು. 13 ಸುತ್ತು ಗುಂಡುಗಳನ್ನು ಹಾರಿಸಲಾಯಿತು. ನಂತರ ಅಕ್ಬರ್‍ನನ್ನು ಪೊಲೀಸರು ಬಂಧಿಸಿದರು. ಈತನ ಜೊತೆಗಿದ್ದ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.   ಬಂಧಿತ ಅಕ್ಬರ್‍ನಿಂದ ಗುಂಡು ನಿರೋಧಕ ಜಾಕೆಟ್, ಗನ್ ಮತ್ತು ಬುಲೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಂಡಿನ ಚಕಮಕಿ ವೇಳೆ ಮೇಟ್ರೋ ಸಂಚಾರ ಆರಂಭವಾಗದ ಕಾರಣ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ಧಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin