ದೆಹಲಿ ವಕೀಲರೊಬ್ಬರ ಆದಾಯ ಕಂಡು ದಂಗಾದ ಆದಾಯ ತೆರಿಗೆ ಅಧಿಕಾರಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

high-court-9

ನವದೆಹಲಿ, ಅ.20- ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ನ ವಕೀಲರೊಬ್ಬರು ಲೆಕ್ಕಕ್ಕೆ ಸಿಗದ 125 ಕೋಟಿ ರೂ.ಗಳ ವರಮಾನವನ್ನು ಆದಾಯ ತೆರಿಗೆ ಇಲಾಖೆ ಮುಂದೆ ಘೋಷಿಸುವ ಮೂಲಕ ರಾಜಧಾನಿಯ ನ್ಯಾಯಿಕ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ದಕ್ಷಿಣ ದೆಹಲಿಯ ತಮ್ಮ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದಾಗ ಈ ವಕೀಲ ಲೆಕ್ಕಕ್ಕೆ ಸಿಗದ 125 ಕೋಟಿ ರೂ. ವರಮಾನ ಘೋಷಿಸಿ ಚಕಿತಗೊಳಿಸಿದರು. ದೆಹಲಿಯ ವಕೀಲರ ವಲಯದಲ್ಲಿ ಉತ್ತಮ ಹೆಸರು ಗಳಿಸಿರುವ ಈ ನ್ಯಾಯವಾದಿ ದೆಹಲಿಯಲ್ಲಿ 100 ಕೋಟಿ ರೂ. ಮೌಲ್ಯದ ಬಂಗಲೆ ಖರೀದಿಸಿ ಎಲ್ಲರ ಕಣ್ಣು ಕುಕ್ಕಿದರು. ಈ ವಕೀಲರು ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ಇದಲ್ಲದೆ 125 ಕೋಟಿ ರೂ. ಮೌಲ್ಯದ ವರಮಾನ ತಮಗಿರುವುದನ್ನು ವಿಚಾರಣೆ ವೇಳೆ ಘೋಷಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin