ದೆಹಲಿ ವಿಮಾನ ನಿಲ್ದಾಣದಲ್ಲಿ ನೈಜೀರಿಯಾ ಪ್ರಜೆ ಬಳಿಯಿದ್ದ 54 ಲಕ್ಷ ರೂ. ಹೊಸ ನೋಟು ವಶ

ಈ ಸುದ್ದಿಯನ್ನು ಶೇರ್ ಮಾಡಿ

Nigerian-Arrested

ನವದೆಹಲಿ, ಡಿ.23- ಇಂದಿರಾಗಾಂಧಿ ಅಂತಾರಾಷ್ಡ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐಎ) ಇಂದು ನೈಜೀರಿಯಾ ಪ್ರಜೆಯೊಬ್ಬನನ್ನು ಬಂಧಿಸಿರುವ ಏರ್‍ಪೋರ್ಟ್‍ನ ಭದ್ರತಾ ಸಿಬ್ಬಂದಿ ಆತನ ಬಳಿ ಇದ್ದ 54 ಲಕ್ಷ ರೂ. ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ಧಾರೆ. ದೆಹಲಿಯಿಂದ ಕೊಯಮತ್ತೂರಿಗೆ ಪ್ರಯಾಣ ಮಾಡಬೇಕಿದ್ದ ನೈಜೀರಿಯಾ ಪ್ರಜೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಸಿಬ್ಬಂದಿ ಇಂದು ಮುಂಜಾನೆ ತಪಾಸಣೆಗೆ ಒಳಪಡಿಸಿದಾಗ ಆತನ ಬಳಿ 53.78 ಲಕ್ಷ ರೂ. ಹೊಸ ಕರೆನ್ಸಿ ಮತ್ತು 4.29 ಲಕ್ಷ ರೂ. ಹಳೆ ನೋಟುಗಳು ಪತ್ತೆಯಾದವು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin