ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ತೀವ್ರ ಶೀತಗಾಳಿಗೆ ಐವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

North-India-----015

ಮುಜಾಫರ್‍ನಗರ್, ಜ.5-ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ತೀವ್ರ ಶೀತ ಹವೆಯ ಆರ್ಭಟ ಮುಂದುವರಿದಿದೆ. ಉತ್ತರ ಪ್ರದೇಶದ ಮುಜಾಫರ್‍ನಗರ್ ಮತ್ತು ಶಾಮ್ಲಿ ಜಿಲ್ಲೆಗಳಲ್ಲಿ ಥಂಡಿ ವಾತಾವರಣಕ್ಕೆ ಐವರು ಬಲಿಯಾಗಿದ್ದಾರೆ. ಮುರಾನ್‍ಪುರ್ ಪಟ್ಟಣದಲ್ಲಿ ಶೀತ ಹವೆಗೆ ಖೆರಾತಿ(70) ಎಂಬ ವೃದ್ದರು ಮೃತರಾಗಿದ್ದು, ಜನ್‍ಸಾಥ್ ನಗರದಲ್ಲಿ ಪ್ರತಿಕೂಲ ಹವಾಮಾನ 40 ವರ್ಷ ಕುಲದೀಪ್ ಎಂಬಾತನನ್ನು ಬಲಿ ಪಡೆದಿದೆ.   ಮುಜಾಫರ್‍ನಗರ್ ಜಿಲ್ಲೆಯ ಬಿಹಾರಿಘರ್ ಗ್ರಾಮದಲ್ಲಿ ಥಂಡಿ ವಾತಾವರಣದಿಂದ 50 ವರ್ಷದ ಕೂಲಿ ಕಾರ್ಮಿಕ ಬುಧ್ ಸಿಂಗ್ ಸೈನಿ ಅಸುನೀಗಿದ್ದಾನೆ.

ಶಾಮ್ಲಿ ರೈಲು ನಿಲ್ದಾಣದಲ್ಲಿ ಶೀತ ಹವೆಯಿಂದ ಪಪನ್(48) ಸೆಟೆದುಕೊಂಡು ಸಾವಿಗೀಡಾಗಿದ್ದಾರೆ. ನವದೆಹಲಿ, ಹರಿಯಾಣ, ಉತ್ತರಪ್ರದೇಶ, ಪಂಜಾಬ್, ರಾಜಸ್ತಾನ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಶೀವ್ರ ತೀತ ಹವೆ ಮುಂದುವರಿದಿದೆ. ಮಂಜು ಮುಸುಕಿದ ವಾತಾವರಣದಿಂದ ರೈಲುಗಳ ಸಂಚಾರ ಮತ್ತು ವಿಮಾನಗಳ ಹಾರಾಟಕ್ಕೆ ಅಡಚಣೆಯಾಗಿದೆ.

Facebook Comments

Sri Raghav

Admin