ದೇವನೂರು ಮಹಾದೇವ ಅವರಿಗೆ 2016ನೇ ಸಾಲಿನ ಪ್ರತಿಷ್ಠಿತ ಕುವೆಂಪು ರಾಷ್ಟ್ರೀಯ ಪ್ರಶಸ್ತಿ
ಬೆಂಗಳೂರು ಅ.06 : ಹಿರಿಯ ಸಾಹಿತಿ ದೇವನೂರು ಮಹಾದೇವ ಅವರನ್ನು 2016ನೇ ಸಾಲಿನ ಪ್ರತಿಷ್ಠಿತ ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕುವೆಂಪು ಪ್ರತಿಷ್ಠಾನ ನೀಡುವ ಈ ಪ್ರಶಸ್ತಿಯನ್ನು ಕನ್ನಡನಾಡಿನ ಖ್ಯಾತ ಕವಿ ಕುವೆಂಪು ಅವರ ಜನ್ಮದಿನವಾದ ಅಂಗವಾಗಿ ಡಿ.1ರಂದು ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೋ.ಹಂಪ ನಾಗರಾಜಯ್ಯ ಅವರು ಬುಧವಾರ ಪ್ರಕಟಿಸಿದರು. ಮೈಸೂರು ಜಿಲ್ಲೆಯ ನಂಜನಗೂಡಿನ ದೇವನೂರು ಮಹಾದೇವ ಅವರ ಜನ್ಮಸ್ಥಳ. ನಂಜನಗೂಡು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಕೆಲಕಾಲ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೃಷಿಯಲ್ಲಿ ವಿಶೇಷವಾದ ಆಸಕ್ತಿ ಹೊಂದಿರುವ ದೇವನೂರು ಮಹಾದೇವ ಅವರ ಕಿರು ಕಾದಂಬರಿ ‘ಒಡಲಾಳ’ ಕೃತಿಯನ್ನು ಕೋಲ್ಕತದ ಭಾರತೀಯ ಪರಿಷತ್ 1984ರಲ್ಲಿ ಉತ್ತಮ ಶೃಜನಶೀಲ ಕೃತಿ ಎಂದು ಗೌರವಿಸಿದೆ. 1991ರಲ್ಲಿ ಅವರ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
► Follow us on – Facebook / Twitter / Google+