ದೇವರಾಜ ಅರಸು ಅವರಿಗೆ ಭಾರತ ರತ್ನ ದೊರೆಯಲಿ : ವಾಟಾಳ್

ಈ ಸುದ್ದಿಯನ್ನು ಶೇರ್ ಮಾಡಿ

vATAL

ಬೆಂಗಳೂರು, ಆ.20- ಸಾಮಾಜಿಕ ನ್ಯಾಯದ ಹರಿಕಾರ, ಪರಿವರ್ತನೆಯ ಸರದಾರ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವವನ್ನು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅರ್ಥಪೂರ್ಣವಾಗಿ ಆಚರಿಸಿದರು.  ದೇವರಾಜ ಅರಸು ಅವರ ಆಳೆತ್ತರದ ಭಾವಚಿತ್ರವನ್ನು ಬೆಳ್ಳಿ ಸಾರೋಟದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೆಂಪೇಗೌಡ ಬಸ್ ನಿಲ್ದಾಣದವರೆಗೆ ಮೆರವಣಿಗೆ ಮಾಡಿದರು. ಇದಕ್ಕೂ ಮುನ್ನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ದೇವರಾಜ ಅರಸು ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಿಸಲು ಸರ್ಕಾರ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ಬಡವರು, ಹಿಂದುಳಿದವರು, ಶೋಷಿತರ ಪರ ಅವರು ಮಾಡಿದ ಕೆಲಸಗಳಿಗೆ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಹೇಳಿದರು.  ಅವರು ಕೈಗೊಂಡ ಕ್ರಾಂತಿಕಾರಿ ಉಳುವವನೇ ಭೂಮಿಯ ಒಡೆಯ ಎಂಬ ಯೋಜನೆಯಿಂದ ಲಕ್ಷಾಂತರ ಜನ ಇಂದು ಬದುಕುತ್ತಿದ್ದಾರೆ. ಅರಸು ಅವರ ಜನ್ಮ ಶತಮಾನೋತ್ಸವ ನಾಡಿನ ಉತ್ಸವವಾಗಿ ಆಚರಣೆಯಾಗಬೇಕು. ಅವರ ಹೆಸರಿನಲ್ಲಿ ಅಂಚೆ ಚೀಟಿ ಬರಬೇಕಾಗಿತ್ತು. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕಾಗಿತ್ತು. ಇದಾವುದೂ ಆಗದಿರುವುದು ದುರದೃಷ್ಟಕರ ಎಂದು ಹೇಳಿದರು.  ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಲು ನಾನು ಕೆ.ಎಚ್.ಪಾಟೀಲ್, ಅನ್ನದಾನಪ್ಪ, ಶಾಂತವೀರ ಗೋಪಾಲಗೌಡ ಸೇರಿದಂತೆ ಅನೇಕ ಮುಖಂಡರು ಒತ್ತಾಯಿಸಿದ್ದೆವು. ಎಲ್ಲರ ವಿರೋಧದ ನಡುವೆಯೂ ಅವರು ಜನರ ಭಾವನೆಗಳಿಗೆ ತಲೆಬಾಗಿ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದಾಗ ಅವರನ್ನು ವಿಧಾನಸೌಧದ ಮುಂದೆ ಪ್ರಥಮ ಬಾರಿಗೆ ಅದ್ಧೂರಿಯಾಗಿ ಸನ್ಮಾನಿಸಲಾಯಿತು ಎಂದು ವಾಟಾಳ್ ಸ್ಮರಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin