ದೇವರಾಜ ಅರಸು ಉಪಯೋಗಿಸುತ್ತಿದ್ದ ಬೆಂಜ್ ಕಾರಿನಲ್ಲಿ ಬಂದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Benz ಬೆಂಗಳೂರು, ಆ.20- ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಉಪಯೋಗಿಸುತ್ತಿದ್ದ ಬೆಂಜ್-58 ಕಾರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸೌಧಕ್ಕೆ ಆಗಮಿಸಿ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದು ವಿಶೇಷವಾಗಿತ್ತು. ಅರಸು ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅರಸು ಅವರು ಉಪಯೋಗಿಸುತ್ತಿದ್ದ ಕಾರಿನಲ್ಲಿಯೇ ಬಂದ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿದ ಬಳಿಕ ಅದೇ ಕಾರಿನಲ್ಲಿ ವಿಧಾನಸೌಧದ ಪಶ್ಚಿಮ ದ್ವಾರದವರೆಗೂ ಪ್ರಯಾಣಿಸಿ ಕಚೇರಿಗೆ ತೆರಳಿದರು.  ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಇದೇ ಕಾರನ್ನು ಉಪಯೋಗಿಸುತ್ತಿದ್ದರು. ಆಗಿನಿಂದಲೂ ಈ ಕಾರನ್ನು ಜೋಪಾನವಾಗಿ ಇಡಲಾಗಿದೆ. ಅರಸು ಅವರು ಸಿಎಂ ಆಗಿದ್ದಾಗ ಕಾರಿನಲ್ಲಿ ಬಂದು ಇಳಿಯುತ್ತಿದ್ದ ಪಶ್ಚಿಮ ದ್ವಾರದ ಮುಂಬಾಗಿಲ ಮೆಟ್ಟಿಲುಗಳವರೆಗೆ ಇದೇ ಕಾರಿನಲ್ಲಿ ಇಂದು ಬಂದು ಸಿಎಂ ಸಿದ್ದರಾಮಯ್ಯ ಇಳಿದರು.

ಅರಸು ಆದರ್ಶಗಳು ಅನುಕರಣೀಯ : ಸಿದ್ದರಾಮಯ್ಯ

benz-3

ದೇಶಕಂಡ ಮಹಾನ್ ನಾಯಕ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರು ದೇಶದಲ್ಲೇ ಸಂಪರ್ಕ ಕ್ರಾಂತಿ ಉಂಟಾಗಲು ಪ್ರಮುಖ ಕಾರಣಕರ್ತರಾಗಿದ್ದರು ಹಾಗೂ ರಾಜಕೀಯವಾಗಿ ಎಲ್ಲರಿಗೂ ಸಮಾನ ಅವಕಾಶ ನೀಡಿದ ಮಹಾನ್ ವ್ಯಕ್ತಿ. ಅವರ ವಿಚಾರಧಾರೆ, ಆದರ್ಶಗಳು ಸದಾ ನಮ್ಮ ಜೊತೆಗೆ ಇರುತ್ತವೆ. ಅವರು ಹಾಕಿಕೊಟ್ಟಿರವ ಮಾರ್ಗದಲ್ಲಿ ಆಡಳಿತ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.   ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಹಿಂದುಳಿದ ವರ್ಗಗಳ ವತಿಯಿಂದ ಪುರಭವನದಲ್ಲಿ ನಡೆದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅವಕಾಶಗಳಿಂದ ವಂಚಿತರಾದ ಜನಗಳ ಅಭಿವೃದ್ದಿ ದೇವರಾಜ ಅರಸರ ಕನಸಾಗಿತ್ತು. ರಾಜ್ಯದಲ್ಲಿ ಐತಿಹಾಸಿಕ ಭೂ ಸುಧಾರಣೆ ಜಾರಿಗೆ ತಂದು ಭೂಮಿಯನ್ನು ಸಮಾನ ಹಂಚಿಕೆ ಮಾಡಿದವರು ಎಂದರು.

CM-Siddu

ಮೀಸಲಾತಿ ಜಾರಿಗೆ ತಂದು ಎಲ್ಲ ವರ್ಗದ ಜನರಿಗೆ ಸಮಾನ ಅವಕಾಶ ಕಲ್ಪಿಸುವಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟವರು. ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ಹಿಂದುಳಿದವರ, ಅಲ್ಪಸಂಖ್ಯಾತ ಹಾಗೂ ದಲಿತರ ಅಭಿವೃದ್ದಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.   ಸಂಸದ ವೀರಪ್ಪ ಮೊಯ್ಲಿ ಮಾತನಾಡಿ, ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರು ಹಿಂದುಳಿದ ಹಾಗೂ ಶೋಷಿತ ವರ್ಗದವರಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಶ್ರಮಿಸಿದ್ದಾರೆ ಎಂದು ತಿಳಿಸಿದರು.  ಇದೇ ಸಂದರ್ಭದಲ್ಲಿ ಹುಳಗಪ್ಪ ಕಟ್ಟಿಮನಿ ಅವರಿಗೆ 2016ನೇ ಸಾಲಿನ ದೇವರಾಜ ಅರಸು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಎಐಸಿಸಿ ಮುಖ್ಯ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಹಾಗೂ ಹಿಂದುಳಿದ ವರ್ಗಗಳ ಅಧ್ಯಕ್ಷ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin

Comments are closed.