ದೇವರಿಗಾಗಿ ಅಂತಾರಾಷ್ಟ್ರೀಯ ವಿಮಾನನಿಲ್ಡಾಣವೇ ಬಂದ್..!!

ಈ ಸುದ್ದಿಯನ್ನು ಶೇರ್ ಮಾಡಿ

Airport--012

ತಿರುವನಂತಪುರಂ, ಅ.27-ದೇವರು ಅಥವಾ ದೇವಾಲಯಕ್ಕಾಗಿ ತನ್ನ ರನ್‍ವೇ ಬಂದ್ ಮಾಡುವ ಮತ್ತು ವಿಮಾನಗಳ ಹಾರಾಟದ ವೇಳಾಪಟ್ಟಿಯನ್ನು ಮಾರ್ಪಡಿಸುವ ಯಾವುದಾದರೂ ವಿಮಾನನಿಲ್ದಾಣ ಈ ಜಗತ್ತಿನಲ್ಲಿ ಇದೆಯೇ..? ಖಂಡಿತಾ ಇದೆ..!!  ಕೇರಳ ರಾಜಧಾನಿ ತಿರುವನಂತಪುರದ ಇಂಟರ್‍ನ್ಯಾಷನಲ್ ಏರ್‍ಪೋರ್ಟ್ ಹಲವು ದಶಕಗಳಿಂದಲೂ ವರ್ಷಕ್ಕೆ ಎರಡು ಬಾರಿ ವಿಮಾನಗಳ ಹಾರಾಟ ನಿಲ್ಲಿಸುವ ಮತ್ತು ವೇಳಾಪಟ್ಟಿಯನ್ನು ಬದಲಿಸುವ ಪರಿಪಾಠವನ್ನು ಅನುಸರಿಸಿಕೊಂಡು ಬರುತ್ತಿರುವ ವಿಶ್ವದ ಏಕೈಕ ವಿಮಾನನಿಲ್ದಾಣ.

ಇಲ್ಲಿನ ಜಗದ್ವಿಖ್ಯಾತ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ವಾರ್ಷಿಕ ಉತ್ಸವಗಳ ಅಂಗವಾಗಿ ನಡೆಯುವ ಧಾರ್ಮಿಕ ಮೆರವಣಿಗೆ ಸಂದರ್ಭದಲ್ಲಿ ವಿಮಾನನಿಲ್ದಾಣವೇ ಬಂದ್ ಆಗುತ್ತದೆ.  ದಕ್ಷಿಣ ಭಾರತದಲ್ಲಿ ಅದರಲ್ಲೂ ಕೇರಳ ಮತ್ತು ತಮಿಳುನಾಡಿನಲ್ಲಿ ಪೈನ್‍ಕುನಿ ಮತ್ತು ಅಲಪಸ್ಸಿ ಈ ಎರಡೂ ಮಾಸಗಳನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ.

ಶ್ರೀ ಪದ್ಮನಾಭ ದೇವಸ್ಥಾನದಲ್ಲಿ ಈ ಎರಡು ಪವಿತ್ರ ಮಾಸಗಳು 10 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ಕೊನೆ ದಿನ ದೇಗುಲದ ವಿಗ್ರಹಗಳ ಮೆರವಣಿಗೆಯು ವಿಮಾನನಿಲ್ದಾಣದ ರನ್‍ವೇ ಮೂಲಕ ಹಾದು ಹೋಗುತ್ತದೆ. ಈ ಸಂದರ್ಭದಲ್ಲಿ ಐದು ತಾಸುಗಳ ಕಾಲ ಏರ್‍ಪೋರ್ಟ್ ಸಂಪೂರ್ಣ ಬಂದ್ ಆಗುತ್ತದೆ. ಮೇಲೇರುವ ಮತ್ತು ಕೆಳಗಿಳಿಸುವ ವಿಮಾನಗಳಿಗೆ ಈ ಅವಧಿಯಲ್ಲಿ ಅವಕಾಶ ಇರುವುದಿಲ್ಲ. ವಿಮಾನಗಳ ವೇಳಾಪಟ್ಟಿಯನ್ನು ಬದಲಿಸಿ ಅಧಿಕಾರಿಗಳು ನೋಟಮ್ (ಏರ್‍ಮೆನ್‍ಗೆ ನೋಟಿಸ್) ನೀಡುತ್ತಾರೆ.

Airport--02.3

ದೇವರ ಪ್ರತಿಮೆಗಳನ್ನು ಏರ್‍ಪೋರ್ಟ್ ಹತ್ತಿರ ಷಣ್ಮುಗಂ ಬೀಚ್‍ನಲ್ಲಿ ಸ್ನಾನಕ್ಕಾಗಿ ಕರೆದೊಯ್ಯುವ ಈ ಮೆರವಣಿಗೆ ವೇಳೆ ಶಸ್ತ್ರಸಜ್ಜಿತ ಸಿಐಎಸ್‍ಎಫ್(ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ-ಸಿಐಎಸ್‍ಎಫ್) ಸಿಬ್ಬಂದಿ ರನ್‍ವೇ ಇಕ್ಕೆಲಗಳಲ್ಲಿ ಸೈನಿಕರಂತೆ ನಿಂತು ಉತ್ಸವ ಮೂರ್ತಿಗಳು ತೆರಳಲು ಅನುವು ಮಾಡಿಕೊಡುತ್ತಾರೆ.  ದೇವರ ಪುತ್ಥಳಿಗಳಿಗೆ ಸ್ನಾನಾದಿ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ಅದೇ ಮಾರ್ಗವಾಗಿ ಮತ್ತೆ ಮೆರವಣಿಗೆಯಲ್ಲಿ ಹಿಂದುರುಗಲಾಗುತ್ತದೆ. ಈ ಕಾರ್ಯಕ್ಕೆ ಐದು ತಾಸುಗಳು ಬೇಕಾಗುತ್ತದೆ. ಮೆರವಣಿಗೆ ಅಂತ್ಯಗೊಂಡ ನಂತರವಷ್ಟೇ ವಿಮಾನ ನಿಲ್ದಾಣ ಯಥಾಪ್ರಕಾರ ಕಾರ್ಯನಿರ್ವಹಿಸುತ್ತದೆ.

Facebook Comments

Sri Raghav

Admin