ದೇವರ ನಾಡು ಕೇರಳದಲ್ಲಿ 10 ವರ್ಷಗಳಲ್ಲಿ 16,755 ಅತ್ಯಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

Rape--01

ತಿರುವನಂತಪುರಂ, ಡಿ.29-ಕರಾವಳಿ ರಾಜ್ಯ ಕೇರಳದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧ ಕೃತ್ಯಗಳ ಪ್ರಮಾಣದಲ್ಲಿ ಆತಂಕಕಾರಿ ಹೆಚ್ಚಳ ಕಂಡುಬಂದಿದೆ. ಶೇಕಡ 100ರಷ್ಟು ಸಾಕ್ಷಾರತೆ, ಪ್ರಗತಿಪರ ದೃಷ್ಟಿಕೋನ ಮತ್ತು ಉನ್ನತಮಟ್ಟದ ಸಾಮಾಜಿಕ-ಅಭಿವೃದ್ಧಿ ಸೂಚ್ಯಂಕ ಹೊಂದಿರುವ ಕೇರಳದಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ಒಟ್ಟು 16,755 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

2007-2017(ಜುಲೈವರೆಗೆ) ರಾಜ್ಯದ ವಿವಿಧ ಭಾಗಗಳಲ್ಲಿ ಮಹಿಳೆಯರ ಮೇಲೆ 11,325 ಅತ್ಯಾಚಾರ ಪ್ರಕರಣಗಳು ಹಾಗೂ ಮಕ್ಕಳ ಮೇಲೆ 5,430 ಲೈಂಗಿಕ ದುರಾಚಾರ ಕೃತ್ಯಗಳು ನಡೆದಿರುವುದು ಕೇರಳ ಪೆÇಲೀಸರು ನೀಡಿರುವ ಅಪರಾಧ ಅಂಕಿ-ಅಂಶಗಳಿಂದ ಬಹಿರಂಗಗೊಂಡಿದೆ. ಕೇರಳದಲ್ಲಿ ಈ ವರ್ಷದ ಮೊದಲ ಒಂಭತ್ತು ತಿಂಗಳಿನಲ್ಲೇ 1.475 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಜನವರಿಯಿಂದ ಡಿಸೆಂಬರ್‍ನಲ್ಲಿ 1,656 ರೇಪ್ ಕೇಸ್‍ಗಳು ದಾಖಲಾಗಿದ್ದವು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin