ದೇವಸ್ಥಾನದಲ್ಲಿ ಕಳವಿಗೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

temple-thift

ಚನ್ನಪಟ್ಟಣ, ಸೆ.2- ಶಕ್ತಿದೇವತೆ ಎಂದೇ ಹೆಸರಾಗಿರುವ ನಗರದ ಕೋಟೆಯ ಕಾಳಮ್ಮನ ದೇವಸ್ಥಾನದಲ್ಲಿ ಕಳ್ಳತನಕ್ಕೆ ವಿಫಲಯತ್ನ ನಡೆದಿದ್ದು, ದೇಗುಲದಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರಾದಲ್ಲಿನ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರ ಪತ್ತೆಗಾಗಿ ನಗರಠಾಣೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿದ್ದಾರೆ.ಬುಧವಾರ ಬೆಳಗಿನ ಜಾವ 3 ರಿಂದ 4 ಗಂಟೆಯೊಳಗೆ ಈ ಕಳ್ಳತನ ಯತ್ನ ನಡೆದಿರಬಹುದೆಂದು ಅಂದಾಜಿಸಲಾಗಿದೆ. ದೇವಸ್ಥಾನದ ಹಿಂಬದಿಯಲ್ಲಿರುವ ಗರಡಿಮನೆಗೆ ಆತುಕೊಂಡಂತಿರುವ ದೇವಸ್ಥಾನವನ್ನು ಕಳ್ಳರುಪ್ರವೇಶಿಸಿದ್ದಾರೆನ್ನಲಾಗಿದೆ.
ನೆಲ ಅಂತಸ್ತಿನಲ್ಲಿರುವ ದೇವಸ್ಥಾನದ ಆಡಳಿತ ಕಛೇರಿಯ ಬಾಗಿಲನ್ನು ಅಲ್ಪಭಾಗ ಮುರಿದಿರುವ ಕಳ್ಳರು ಮುಖ್ಯ ದೇವಸ್ಥಾನದ ಬೀಗಗಳಕೀಲಿಗಾಗಿ ಹುಡುಕಾಡಿದ್ದು, ಕಛೇರಿಯಲ್ಲಿ ಸಿಕ್ಕಿದ ಹಳೆಯ ಕೀಗಳನ್ನು ಅಲ್ಲಿಂದ ಹೊತ್ತೊಯ್ದಿದ್ದಾರೆ.
ನಂತರ ಮುಖ್ಯ ದೇವಸ್ಥಾನದ ಬಾಗಿಲನ್ನು ಮೀಟಿ ತೆಗೆದ ಕಳ್ಳರಿಗೆ ಗರ್ಭಗುಡಿಗೆ ಬೀಗ ಹಾಕಿದ್ದರಿಂದ ಒಳನಸುಳಲು ಸಾಧ್ಯವಾಗಿಲ್ಲ. ನಂತರ ಆಡಳಿತ ಕಛೇರಿಯಲ್ಲಿ ಸಿಕ್ಕಿದ್ದ ಕೀ ಗೊಂಚಲಿನ ಮೂಲಕ ದೇವಸ್ಥಾನದ ಒಳಗಿರುವ ಹುಂಡಿಗಳನ್ನು ತೆರೆಯಲು ವಿಫಲ ಯತ್ನ ನಡೆದಿದೆ. ಯಾವ ವಸ್ತು, ನಗ-ನಾಣ್ಯವೂ ದೊರಕದಿದ್ದರಿಂದ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.ಈ ಸಂಬಂಧ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ನಗರ ಸಿಪಿಐ ವಿ.ನಾರಾಯಣಸ್ವಾಮಿ ಅವರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.ತನಿಖೆಗಾಗಿ ದೇವಸ್ಥಾನದ ಸಿಸಿ ಕ್ಯಾಮೆರಾದ ಕ್ಯಾಸೆಟ್ ಅನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದು, ಬಹುತೇಕ ಮುಖ ಮುಚ್ಚಿಕೊಂಡಿದ್ದರು ಎನ್ನಲಾದ ಕಳ್ಳನ ಅಸಲಿ ಚಿತ್ರ ಪಡೆಯಲು ಪೆÇಲೀಸರು ತಂತ್ರಜ್ಞರನ್ನು ಠಾಣೆಗೆ ಕರೆಯಿಸಿಕೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin