ದೇವಾಲಯದಲ್ಲಿ ಬೆಳ್ಳಿ ವಸ್ತು ಕಳವು

ಈ ಸುದ್ದಿಯನ್ನು ಶೇರ್ ಮಾಡಿ

thifte

ತುರುವೇಕೆರೆ, ಡಿ.3- ಪಟ್ಟಣದ ಬೇಟೆರಾಯ ಸ್ವಾಮಿ ದೇವಸ್ಥಾನದ ಬೀಗ ಮುರಿದು ಕಳ್ಳರು ಸುಮಾರು ಸಾವಿರಾರು ಬೆಲೆ ಬಾಳುವ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದಾರೆ.ಬೇಟರಾಯ ಸ್ವಾಮಿಯ ದೇವಸ್ಥಾನದ ಮುಂಬಾಗಿಲು ಬೀಗ ಮರಿಯದೆ ಕಾಂಪೋ0ಡ್‍ನ ಮೂಲಕ ದೇಗುಲಕ್ಕೆ ತೆರಳಿರುವ ಕಳ್ಳರು ದೇವಸ್ಥಾನದ ಒಳಗಿನ ಭಾಗಿಲು ಬೀಗ ಮುರಿದು ಹುಂಡಿ ಪರಿಶೀಲಿಸಿ ಹಣ ಸಿಗದೆ ಬೆಳ್ಳಿಕಿರೀಟ, ಚಕ್ರಭರಣಿ, ಅಷ್ಟಪಾಧ, ಶಂಕು, ಸೊಂಟದಪಟ್ಟಿ, ಬೆಳಿ ಬಟ್ಟಳು, ತಟ್ಟೇ, ಅಗ್ಯ ಪಾತ್ರೆ, ಅನುಪಯುಕ್ತ ಬೆಳ್ಳಿ ಪಟ್ಟಿ ಶಾರಾಬಿ ಸೇರಿದಂತೆ ಸುಮಾರು ಸಾವಿರಾರು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಲಿಯಾಗಿದ್ದ ಹುಂಡಿ ಹಣ: ಮುಜರಾಯಿ ಇಲಾಕೆಯ ಅಧಿಕಾರಿಗಳು ಒಂದು ದಿನ ಮುಂಚೆಯೇ ಹುಂಡಿಯಲ್ಲಿದ್ದ ಸುಮಾರು 1 ಲಕ್ಷದ 9ಸಾವಿರ ಹಣವನ್ನು ತೆಗೆದು ಬ್ಯಾಂಕಿಗೆ ಜಮಾ ಮಾಡಲಾಗಿದ್ದರಿಂದ ಕಳ್ಳರ ಪಲಾಗುತ್ತಿದ್ದ ಹಣ ತಪ್ಪಿದೆ. ಹುಂಡಿ ಹಣ ಸಿಗದೆ ಹತಾಶರಾಗಿ ಕೈ ಸಿಕ್ಕ ಬೆಳ್ಳಿ ಓಡವೆಗಳನ್ನು ತೆಗೆದುಕೊಂಡು ಹೋಗಿದ್ದಾರೆ.ಸ್ಥಳಕ್ಕೆ ತಹಶೀಲ್ದಾರ್ ಶಿವಲಿಂಗಮೂರ್ತಿ ಹಾಗೂ ಸಿಪಿಐ ರಾಮಚಂದ್ರಪ್ಪ, ಪಿಎಸ್.ಐ ಬೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin