ದೇವಾಲಯದಲ್ಲಿ ಸಂಗ್ರಹಗೊಂಡ ಮರಳು

ಈ ಸುದ್ದಿಯನ್ನು ಶೇರ್ ಮಾಡಿ

12

ಅಮೀನಗಡ,ಸೆ.29-ಸಮೀಪದ ಐಹೊಳೆಯ ಗಳಗನಾಥ ದೇವಾಲಯದಲ್ಲಿ ಸಂಗ್ರಹಗೊಂಡ ಮರಳು ಯಾರದ್ದು? ಎನ್ನುವಗೊಂದಲ ಸೃಷ್ಟಿಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿದೆ.ಸಂಗ್ರಹವಾದ ಮರಳು ನಮಗೆ ಸಂಬಂಧಿಸಿದ್ದು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದರೆ, ಮತ್ತೊಂದೆಡೆ ಪಿಡಬ್ಲುಡಿ ಇಲಾಖೆ ಇದು ನಮ್ಮ ಇಲಾಖೆಗೆ ಸಂಬಂಧಿಸಿದ ಮರಳು ಎಂದು ಹೇಳುವ ಮೂಲಕ ಮತ್ತಷ್ಟು ಸಂಶಯ ಮೂಡಿಸಿ ಗೊಂದಲದ ವಾತಾವರಣ ನಿರ್ಮಾಣ ಮಾಡಿದ್ದರು.ಇದೆಲ್ಲದರ ಮಧ್ಯೆ ಸಂಗ್ರಹಿಸಿದ್ದ ಮರಳಿನ ಮೂಲದಕುರಿತುತನಿಖೆ ಮಾಡುವಂತೆ ಪಿಡಬ್ಲುಡಿ ಇಲಾಖೆಗೆ ಹುನಗುಂದ ತಹಸೀಲ್ದಾರ್ ಆದೇಶ ನೀಡಿದ್ದಾರೆ.

ಸಾರ್ವಜನಿಕರ ಮಾಹಿತಿ ಮೇರೆಗೆ ಸೆ.26ರಂದು ಮಧ್ಯಾಹ್ನ 11.30 ಘಂಟೆಗೆಇಲ್ಲಿನ ನಾಡಕಚೇರಿ ಉಪತಹಸೀಲ್ದಾರ ಎಸ್.ವಿ.ಕುಂದರಗಿ ಹಾಗೂ ಗ್ರಾಮಲೆಕ್ಕಾಧಿಕಾರಿಎಂ.ಎಸ್.ರೊಟ್ಟಿ ಸ್ಥಳಕ್ಕೆ ಭೈೀಟಿ ನೀಡಿದ್ದರು.ಈ ಕುರಿತಂತೆ ಸಂಬಂಧಿಸಿದ ಪುರಾತತ್ವ ಇಲಾಖೆ ಅಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ನಮ್ಮ ಕೆಲಸಕ್ಕೆ ಸಂಗ್ರಹಿಸಿದ್ದೇವೆ. ನಾವು ಕೇಂದ್ರ ಸರಕಾರದವರು.ಪ್ರಾಮಾಣಿಕವಾಗಿಕಾರ್ಯ ನಿರ್ವಹಿಸುತ್ತೇವೆ. ದೇವಸ್ಥಾನ ನಿರ್ಮಾಣಕ್ಕೆಟೆಂಡರ್ ಹಿಡಿದಗುತ್ತಿಗೆದಾರರು ಸಂಗ್ರಹಿಸಿದ್ದಾರೆ.ಅವರನ್ನೇ ಕೇಳಿ ಎಂದು ನುಣುಚಿಕೊಂಡರು.
ಇತ್ತಗುತ್ತಿಗೆದಾರರುಕಂದಾಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ನಮ್ಮಲ್ಲಿಎಲ್ಲ ದಾಖಲೆಗಳಿದ್ದು ಹಾಜರು ಪಡಿಸುತ್ತೇವೆಎಂದು ತಿಳಿಸಿದರೆ ಹೊರತು ಸ್ಥಳಕ್ಕೆ ಬರುವಲ್ಲಿ ಹಿಂದೇಟು ಹಾಕಿದರು.ದಾಖಲೆಗಳನ್ನು ನೋಡಿಯೇಜಾಗ ಬಿಡಬೇಕೆಂದು ಪಟ್ಟು ಹಿಡಿದಕಂದಾಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಠಿಕಾಣಿ ಹೂಡಿದರು.ಇದೆಲ್ಲವನ್ನುತಮ್ಮ ಹಿಂಬಾಲಕರ ಮೂಲಕ ಮಾಹಿತಿ ಪಡೆಯತ್ತಿದ್ದಗುತ್ತಿಗೆದಾರರು ಸಂಜೆ 4.30ಕ್ಕೆ ಮರಳು ಅನುಮತಿ ಪಡೆದ ಪತ್ರಗಳನ್ನು ಹಾಜರು ಪಡಿಸಿದರು.

ಆದರೆಅವರು ಹಾಜರುಪಡಿಸಿದ ದಾಖಲೆಗಳು ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಅನುಮತಿ ಪಡೆದ ದಾಖಲೆಗಳಾಗಿದ್ದವು.ಆದರೆ ಮರಳು ಸಂಗ್ರಹವಾಗಿ ಆರೇಳು ತಿಂಗಳುಗಳೇ ಆಗಿತ್ತು ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸೂಕ್ತ ಪರಿಶೀಲನೆಗೆ ಒಳಪಡಿಸಬೇಕು ಎಂದುಗ್ರಾಮ ಲೆಕ್ಕಾಧಿಕಾರಿತಹಸೀಲ್ದಾರ ಕಚೇರಿಗೆ ಪತ್ರ ಬರೆದರು.ಇತ್ತ ಸೆ.27ರಂದು ವಿಶ್ವ ಪ್ರವಾಸೊದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಐಹೊಳೆಗೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಮರಳು ಸಂಗ್ರಹಕುರಿತು ವರದಿಗಾರರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಲ್ಲಿಯೇಇದ್ದ ಪಿಡಬ್ಲ್ಯೂಡಿ ಎಇಇ ಶಂಕರ ಮಳಗಿ ಅವರನ್ನು ವಿಚಾರಿಸಿದಾಗ ಅಲ್ಲಿ ಸಂಗ್ರಹಗೊಂಡ ಮರಳು ನಮ್ಮ ಇಲಾಖೆಗೆ ಸಂಬಂಧಿಸಿದ್ದು, ಅಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ ನಮ್ಮಗುತ್ತಿಗೆದಾರದೇಶಮುಖಅವರು ಸಂಗ್ರಹಿಸಿದ್ದಾರೆ ಎಂದು ತಿಳಿಸಿದರು.

ಈ ಹೇಳಿಕೆ ಮತ್ತಷ್ಟುಗೊಂದಲ ಸೃಷ್ಠಿಸಿದ್ದು, ಸದ್ಯ ಮರಳು ಯಾರದ್ದು?ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆಎಂದು ತಿಳಿಸುವ ಪುರಾತತ್ವಇಲಾಖೆಯವರದ್ದೇಅಥವಾ ಪಿಡಬ್ಲೂಡಿ ಇಲಾಖೆಗೆ ಸಂಬಂಧಿಸಿದ್ದೇ ಎನ್ನುವ ಸಂಶಯ ಮೂಡಿದೆ.ಸೆ.26ರಂದು ಸಂಗ್ರಹಗೊಂಡ ಮರಳಿನ ಕುರಿತುಚಕಾರವೆತ್ತದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿ ಮುಂದೆ ಸೆ.27ರಂದು ಸಂಗ್ರಹಗೊಂಡ ಮರಳು ನಮ್ಮ ಇಲಾಖೆಗೆ ಸಂಬಂಧಿಸಿದ್ದು ಎಂದು ಹೇಗೆ ಒಪ್ಪಿಕೊಂಡರು.ಈ ಎಲ್ಲ ಹೇಳಿಕೆಗಳು ತೀವ್ರಗೊಂದಲ ಮೂಡಿಸುತ್ತಿದ್ದುಇದರ ಹಿಂದೆ ಮರಳಿನ ದೊಡ್ಡ ಮಾಫಿಯಾ ಕೆಲಸ ಮಾಡುತ್ತಿದೆ ಎಂಬ ಬಲವಾದ ಕಾರಣಗಳು ಕಂಡು ಬರುತ್ತಿವೆ. ಈಗಾಗಲೆ ತಹಸೀಲ್ದಾರ ಕಚೇರಿಯಿಂದ ಮರಳಿನ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದು ಮುಂದೇನಾಗುತ್ತದೆಯೋಕಾದು ನೋಡಬೇಕಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin