ದೇವಾಲಯದ ಹುಂಡಿ ಹಣ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

mysore--tample

ಮೈಸೂರು, ಆ.16-ಇಲ್ಲಿನ ಪ್ರಸಿದ್ಧ ಶನೇಶ್ವರ ದೇವಾಲಯದ ಬಾಗಿಲು ಮೀಟಿ ಒಳನುಗ್ಗಿರುವ ಚೋರರು ಹುಂಡಿ ಒಡೆದು ಹಣವನ್ನು ಕದ್ದೊಯ್ದಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಜೆ.ಪಿ.ನಗರದಲ್ಲಿನ ಶ್ರೀ ಶನೇಶ್ವರ ದೇವಾಲಯಕ್ಕೆ ರಾತ್ರಿ ಚೋರರು ನುಗ್ಗಿ ಬಾಗಿಲು ಮೀಟಿ ಒಳನುಗ್ಗಿ ಹುಂಡಿ ಒಡೆದು ಅದರಲ್ಲಿದ್ದ ಹಣ ದೋಚಿದ್ದು, ಇಂದು ಬೆಳಗ್ಗೆ ಅರ್ಚಕರು ದೇವಾಲಯಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.  ಹುಂಡಿಯಲ್ಲಿದ್ದ ಹಣದ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲ. ಸುದ್ದಿ ತಿಳಿದ ಪೊಲೀಸರು ಬೆರಳಚ್ಚು ತಜ್ಞರೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin