ದೇವಾಲಯ ಮನುಷ್ಯ ಶ್ರದ್ಧಾ ಕೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

nirmalananda

ಚನ್ನಪಟ್ಟಣ, ಆ.12- ದೇವಾಲಯಗಳು ಮನುಷ್ಯನ ಶ್ರದ್ದಾಕೇಂದ್ರಗಳು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲ್ಲೂಕಿನ ಅವ್ವೇರಹಳ್ಳಿಯ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನ ಸೇವಾಟ್ರಸ್ಟ್ ಆಯೋಜಿಸಲಾಗಿದ್ದ ಶ್ರೀ ಜೇಷ್ಠಾದೇವಿ ಸಮೇತ ಶ್ರೀ ಶನೇಶ್ವರ ಸ್ವಾಮಿ ನಾಗದೇವತೆಗಳ ಗೋಪುರ ಕಳಶ ಪ್ರತಿಷ್ಠಾಪನೆ, ದೇವಸ್ಥಾನದ ಜೀಣೋದ್ದಾರ ಮತ್ತು ನವಗ್ರಹಗಳ ಕರಗ ಮಹೋತ್ಸವ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ದೇವರು, ನಂಬಿಕೆ, ಪೂಜೆ ಪುನಸ್ಕಾರದ ಜೊತೆ ಮಾನವೀಯ ಮೌಲ್ಯಗಳು ಅಡಕವಾಗಿವೆ. ಪ್ರತಿನಿತ್ಯ ಜಂಜಾಟದಲ್ಲಿ ಬದುಕು ನಡೆಸುವ ಮಾನವನಿಗೆ ಶಾಂತಿ-ನೆಮ್ಮದಿ ಆತ್ಮಸ್ಥೈರ್ಯ ನೀಡುವ ದೇವಾಲಯಗಳ ಬಗ್ಗೆ ಗ್ರಾಮೀಣರಲ್ಲಿ ಆಸಕ್ತಿ ಮೂಡುತ್ತಿರುವುದು ಶ್ಲಾಘನೀಯ ಎಂದರು.ದೇವಾಲಯಗಳು ನಿರ್ಮಾಣವಾದರೆ ಸಾಲದು, ಕಾಲಕಾಲಕ್ಕೆ ದೇವರಿಗೆ ಪೂಜೆ, ಪುನಸ್ಕಾರಗಳು ನಡೆಯಬೇಕು. ಅಲ್ಲದೆ ಬಡವರು ಬಲ್ಲಿದರು ಸಮಾಜದಲ್ಲಿ ತುಳಿತಕ್ಕೊಳಗಾದವರ ಸೇವೆ ಮಾಡುವುದರ ಮುಖಾಂತರ ಕೂಡ ಅವರಲ್ಲಿ ದೇವರನ್ನು ಕಾಣಬೇಕು ಎಂದು ತಿಳಿಸಿದರು.
ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಗ್ರಾಮದಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡಿ, ಶಾಂತಿ, ಸಹಬಾಳ್ವೆ, ದೈವಭಕ್ತ್ನಿ ಅನಾವರಣ ಗೊಳಿಸುತ್ತಿರುವುದು ಉತ್ತಮ ವಿಷಯ ಎಂದರು.ಬನ್ನಿಮಂಟಪದಿಂದ ರಾಜಬೀದಿಯಲ್ಲಿ ಕಳಶ ಕನ್ನಡಿ ಮಂಗಳವಾಧ್ಯ, ತಮಟೆ, ವೀರಗಾಸೆ ಕುಣಿತ, ಶ್ರೀ ಶನೇಶ್ವರ ಸ್ವಾಮಿ, ಶ್ರೀ ಆಂಜನೇಯಸ್ವಾಮಿ, ಸುಳ್ಳೇರಿ ಪಟ್ಟಲದಮ್ಮದೇವಿ, ಹುಣಸನಹಳ್ಳಿ ಶ್ರೀ ಬಿಸಿಲಮ್ಮ ದೇವಿ, ಸೋಗಾಲ ಶ್ರೀಕಾಳಮ್ಮ ದೇವಿ, ಅಕ್ಕೂರು ಶ್ರೀ ಬೈರವೇಶ್ವರ ಸ್ವಾಮಿ ದೇವರುಗಳ ಮೆರವಣಿಗೆಯ ಜೊತೆ ಕರಗದ ಹಾಲರವಿ ಮಹೋತ್ಸವ ನಡೆಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin