ದೇವೇಗೌಡರ ಋಣ ತೀರಿಸಬೇಕು : ಜೆಡಿಎಸ್  ಮುಖಂಡ ಬಿ.ಕಾಂತರಾಜ್

ಈ ಸುದ್ದಿಯನ್ನು ಶೇರ್ ಮಾಡಿ

kantaraaj

ಚಿತ್ರದುರ್ಗ, ಮೇ 17- ನಾಯಕ ಜನಾಂಗಕ್ಕೆ ರಾಜಕೀಯ ಮೀಸಲಾತಿ ನೀಡಿದ್ದು ದೇವೇಗೌಡರು, ಅವರ ಋಣ ತೀರಿಸುವ ಕಾರ್ಯ ಮುಂದಿನ ಚುನಾವಣೆಯಲ್ಲಿ ಮಾಡಬೇಕಿದೆ ಎಂದು ಜೆಡಿಎಸ್ ಮುಖಂಡ ಬಿ.ಕಾಂತರಾಜ್ ಹೇಳಿದರು.ಚಿತ್ರದುರ್ಗ ನಗರದಜಿಲ್ಲಾಧಿಕಾರಿಗಳ  ವೃತ್ತದ ಬಳಿಯ ಜೆಡಿಎಸ್ ಕಛೇರಿಯಲ್ಲಿ ಜೆಡಿಎಸ್ ಪರಿಶಿಷ್ಟ ಪಂಗಡ ಘಟಕದಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶ ಮತ್ತು ಘಟಕಗಳ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸರ್ಕಾರಗಳೂ ಈ ಜನಾಂಗಕ್ಕೆ ಏನು ಅನುಕೂಲ ಮಾಡಿದೆ ಎಂಬುದರ ಬಗ್ಗೆ ಜನಾಂಗದವರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ ನಾಯಕ ಜನಾಂಗದ ಸಮಾವೇಶ ಚಿತ್ರದುರ್ಗದಲ್ಲಿ ಸತೀಶ್ಜಾರಕಿಹೊಳಿ  ನೇತೃತ್ವದಲ್ಲಿ ನಡೆದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಾಂಗಕ್ಕೆ ಏನಾದರೂ ನೀಡುತ್ತಾರೆ ಎಂಬ ಆಕಾಂಕ್ಷೆ ಇದ್ದ ಜನಾಂಗಕ್ಕೆ ಅವರು ಏನು ನೀಡಲಿಲ್ಲ, ಆದರ ಬದಲಾಗಿ ಸಮಾವೇಶದಲ್ಲಿ ಜನತೆಯನ್ನು ನೋಡಿ ಬೇರೆ ರೀತಿಯ ಕೆಲಸ ಮಾಡಿದರು ಎಂದರು.

ಈ ಜನಾಂಗ ರಾಜಕೀಯಕ್ಕೆ ಬರುವುದರ ಮೂಲಕ ಅಭೀವೃದ್ದಿಯನ್ನು ಹೊಂದಬೇಕಿದೆ ಎಂಬ ಉದ್ದೇಶದಿಂದ ಚುನಾವಣೆಯಲ್ಲಿ ಮೀಸಲಾತಿ ಇದ್ದರೂ ಅವುಗಳೊಂದಿಗೆ ಸಾಮಾನ್ಯ ಕ್ಷೇತ್ರದಲ್ಲಿ ರಾಜ್ಯದಲ್ಲಿ 4 ಕಡೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಿದ್ದಾರೆ. ಅದರಲ್ಲಿ ಚಿತ್ರದುರ್ಗವೂ ಸಹ ಸೇರಿದೆ ಎಂದು ಕಾಂತರಾಜ್ ಹೇಳಿದರು.ಜೆಡಿಎಸ್ ಪರಿಶಿಷ್ಟ ಪಂಗಡ ಘಟಕದ ಜಿಲ್ಲಾಧ್ಯಕ್ಷ ಲಕ್ಷ್ಮೀಸಾಗರ ರಾಜಣ್ಣ , ವಕ್ತಾರ ಗೋಪಾಲಸ್ವಾಮಿ ನಾಯಕ್, ಜಿಲ್ಲಾಧ್ಯಕ್ಷ ಯಶೋಧರ, ತಾಲ್ಲೂಕು ಅಧ್ಯಕ್ಷ ತಿಮ್ಮಣ್ಣ, ಮುಂಖಡರಾದ ಗುರುಸಿದ್ದಪ್ಪ, ದೇವರಾಜ್, ಪ್ರತಾಪ್ ಜೋಗಿ ಸೇರಿದಂತೆ ಇತರರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin