ದೇಶದಲ್ಲಿ ಆರ್ಥಿಕ ಚಟುವಟಿಕೆ ಯಥಾಸ್ಥಿತಿಗೆ ಮರಳುತ್ತಿದೆ : ಅರುಣ್ ಜೇಟ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Arun-jeaity';

ನವದೆಹಲಿ, ಜ.8-ಕಾಳಧನ ನಿರ್ಮೂಲನೆಗಾಗಿ ಗರಿಷ್ಠ ಮೌಲ್ಯದ ನೋಟುಗಳನ್ನು ರದ್ದುಗೊಳಿಸಿದ ನಂತರ ಹಣವು ಈಗ ಅಸಲಿ ಮತ್ತು ಅಧಿಕೃತ ಮಾಲೀಕರೊಂದಿಗೆ ಗುರುತಿಸಲ್ಪಟ್ಟಿದೆ ಎಂದು ವ್ಯಾಖ್ಯಾನಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಅವುಗಳ ನಕಲಿತನ ಮತ್ತು ಅನಾಮಧೇಯತೆಯ ಮುಖವಾಡ ಕಳಚಿ ಬಿದ್ದಿದೆ ಎಂದು ಹೇಳಿದ್ದಾರೆ. ದೇಶದ ಜನರು ಅನುಭವಿಸಿದ ಸಂಕಷ್ಟ, ನೋವು ಮತ್ತು ಅನಾನುಕೂಲದ ಅವಧಿ ಮುಗಿಯುತ್ತಾ ಬಂದಿದೆ ಹಾಗೂ ಆರ್ಥಿಕ ಚಟುವಟಿಕೆ ಯಥಾಸ್ಥಿತಿಗೆ ಮರಳುತ್ತಿದೆ ಎಂದು ಜೇಟ್ಲಿ ಹೇಳಿದ್ಧಾರೆ.

ಡಿಮೋನಿಟೈಸೇಷನ್-ಎ ಲುಕ್ ಬ್ಯಾಕ್ ಅಟ್ ದಿ ಲಾಸ್ಟ್ ಟು ಮಂಥ್ಸ್ (ಅಪನಗದೀಕರಣ-ಕಳೆದ ಎರಡು ತಿಂಗಳ ಹಿನ್ನೋಟ) ಶೀರ್ಷಿಕೆಯ ಪೇಸ್‍ಬುಕ್ ಪೋಸ್ಟ್ ನಲ್ಲಿ ನೋಟು ರದ್ಧತಿ ನಂತರದ ಬೆಳವಣಿಗೆಗಳನ್ನು ವಿತ್ತ ಸಚಿವರು ವಿವರಿಸಿದ್ದಾರೆ.  ಬ್ಯಾಂಕುಗಳಲ್ಲಿ ಈಗ ಬೃಹತ್ ಪ್ರಮಾಣದ ನಗದು ಸಂಚಯವಾಗಿದ್ದು, ಕಡಿಮೆ ಬಡ್ಡಿದರಕ್ಕೆ ಹಾದಿ ಸುಗಮಗೊಳಿಸಲಿದ ಎಂದು ಅವರು ಮುನ್ಸೂಚನೆ ನೀಡಿದ್ದಾರೆ.

ದೇಶೀಯ ಒಟ್ಟು ಉತ್ಪನ್ನದ (ಜಿಡಿಪಿ) ಶೇ.12.2ರಷ್ಟು ಪ್ರಮಾಣ ಒಳಗೊಂಡ ದೇಶದ ಶೇ.86ರಷ್ಟು ಕರೆನ್ಸಿಯನ್ನು ಪಡೆಯಲಾಗಿದೆ. ಇದು ಒಂದು ಗಮನಾರ್ಹ ಪರಿಣಾಮ ಬೀರಿದೆ ಎಂದು ಅವರು ಅಂಕಿ-ಅಂಶ ನೀಡಿದ್ದಾರೆ.  ಬ್ಯಾಂಕ್‍ಗಳ ಮುಂದೆ ಜನರ ಸಾಲು ಕಣ್ಮರೆಯಾಗಿದೆ ಮತ್ತು ಪುನರ್‍ನಗದೀಕರಣ ದಾಪುಗಾಲಿನೊಂದಿಗೆ ಮುನ್ನಡೆಯುತ್ತಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin