ದೇಶದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಸೈಕಲ್ ಸಾರಿಗೆ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

Mysuru-Cycle--01

ಬೆಂಗಳೂರು, ಮಾ.7- ದೇಶದಲ್ಲೇ ಮೊದಲ ಬಾರಿಗೆ ಮೈಸೂರು ನಗರದಲ್ಲಿ ಪರಿಸರ ಸ್ನೇಹಿ ನಗರ ಸೈಕಲ್ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್ ತಿಳಿಸಿದ್ದಾರೆ. ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಬಜೆಟ್ ಅಧಿವೇಶನದ ನಂತರ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಸಾರ್ವಜನಿಕ ಬೈಸಿಕಲ್ ಶೇರಿಂಗ್ ವ್ಯವಸ್ಥೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ವಿಶ್ವಬ್ಯಾಂಕ್ ನೆರವಿನ ಈ ಯೋಜನೆ 6 ವರ್ಷಗಳ ಅವಧಿಯದ್ದಾಗಿದ್ದು, 20.52 ಕೋಟಿ ರೂ. ವೆಚ್ಚವಾಗಲಿದೆ. 450 ಸೈಕಲ್‍ಗಳು 48 ನಿಲ್ದಾಣಗಳಲ್ಲಿ ನಿಲ್ಲಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಮೈಸೂರಿನ ಹೆಸರಾಂತ ಪ್ರದೇಶಗಳಾದ ಮೈಸೂರು ಅರಮನೆ, ಚಾಮುಂಡಿಬೆಟ್ಟ, ಉಕ್ಕರಹಳ್ಳಿಕೆರೆ, ರೇಸ್‍ಕೋರ್ಸ್, ಲಷ್ಕರ್‍ಮೊಹಲ್ಲಾ ಮುಂತಾದೆಡೆಗಳಿಗೆ ಪ್ರವಾಸಿಗರು ಬೈಸಿಕಲ್ ಮೂಲಕ ತೆರಳಲು ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.   ರೈಲು ಮತ್ತು ಬಸ್ ನಿಲ್ದಾಣಗಳ ಸಮೀಪದಲ್ಲೇ ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೈಸಿಕಲ್ ನಿಲ್ದಾಣ ತೆರೆಯಲಾಗುವುದು ಎಂದರು. ಆರಂಭಿಕ ಹಂತದಲ್ಲಿ ಈ ಯೋಜನೆಗೆ 7.73 ಕೋಟಿ ರೂ. ವ್ಯಚ್ಚ ಮಾಡಲಾಗಿದೆ ಎಂದು ರೋಷನ್ ಬೇಗ್ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin