ದೇಶದ್ರೋಹದ ಆರೋಪ ಎದುರಿಸುತ್ತಿರುವ ಆಮ್ನೆಸ್ಟಿ ಸಂಸ್ಥೆಗೆ ಕ್ಲೀನ್ ಚಿಟ್..?

ಈ ಸುದ್ದಿಯನ್ನು ಶೇರ್ ಮಾಡಿ

S-Amnesty

ಬೆಂಗಳೂರು, ಆ.26- ದೇಶದ್ರೋಹ ಆರೋಪವನ್ನು ಪುಷ್ಟೀಕರಿಸುವ ಯಾವ ಸಾಕ್ಷ್ಯವೂ ಸಿಕ್ಕಿಲ್ಲವಾದ್ದರಿಂದ ಆಮ್ನೆಸ್ಟಿ ಸಂಸ್ಥೆಗೆ ಕ್ಲೀನ್ ಚಿಟ್ ಸಿಗುವ ಸಾಧ್ಯತೆಗಳಿವೆ. ಎಬಿವಿಪಿ, ಆಮ್ನೆಸ್ಟಿ ಸಂಸ್ಥೆ ನೀಡಿರುವ ಮತ್ತು ಪೊಲೀಸರು ಸಂಗ್ರಹಿಸಿರುವ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, 25 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ದೇಶದ್ರೋಹ ಸಾಬೀತು ಪಡಿಸುವ ಯಾವುದೇ ದಾಖಲೆಗಳು ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.  ಅಷ್ಟೇ ಅಲ್ಲದೆ, ಎಬಿವಿಪಿ ಕಾರ್ಯಕರ್ತ ಜಯಪ್ರಕಾಶ್ ಬೇರೊಬ್ಬರು ಹೇಳಿದ್ದ ಊಹಾತ್ಮಕ ವಿಚಾರಗಳನ್ನು ದೂರಿನಲ್ಲಿ ನೀಡಿzರೆ. ಜತೆಗೆ ಅವರು ನೀಡಿರುವ ದೂರಿನಲ್ಲಿ ಸಾಕಷ್ಟು ಗೊಂದಲಗಳಿವೆ. ಪಾಕಿಸ್ತಾನ, ಐಎಸ್ಐ ಪರ ಘೋಷಣೆ ಕೂಗಿದ್ದಕ್ಕೆ ಸಾಕ್ಷಿಯಾಗಿ ಯಾವುದೇ ವಿಡಿಯೋ ಇಲ್ಲ ಎಂದು ತಿಳಿದು ಬಂದಿದೆ.
ನಗರದ ವಸಂತನಗರದಲ್ಲಿರುವ ದಿ ಯುನೈಟೆಡ್ ಥಿಯಾಲಜಿಕಲ್ ಕಾಲೇಜಿನಲ್ಲಿ ಆಮ್ನೆಸ್ಟಿ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕಳೆದ ಕೆಲ ದಿನಗಳ ಹಿಂದೆ ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಇದನ್ನು ಪ್ರತಿಭಟಿಸಿ ಎಬಿವಿಪಿ ವ್ಯಾಪಕ ಪ್ರತಿಭಟನೆಯನ್ನು ಕೈಗೊಂಡಿತ್ತು. ಅಷ್ಟೇ ಅಲ್ಲದೆ ಆಮ್ನೆಸ್ಟಿ ಸಂಸ್ಥೆ ವಿರುದ್ಧ ದೇಶದ್ರೋಹ, ಕೋಮುಗಲಭೆ ಸೃಷ್ಟಿಸಿದ ಆರೋಪ ಹೊರಿಸಿ ಎಫ್ಐಆರ್ ದಾಖಲಿಸಲಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin