ದೇಶದ ಅಭಿವೃದ್ಧಿ, ಬೆಳವಣಿಗೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳ ಸೇವೆ ಅನನ್ಯ

ಈ ಸುದ್ದಿಯನ್ನು ಶೇರ್ ಮಾಡಿ

saarige-bus
ಬೆಂಗಳೂರು, ಆ.28- ದೇಶದ ಅಭಿವೃದ್ಧಿ, ಬೆಳವಣಿಗೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳ ಸೇವೆ ಅನನ್ಯವಾದುದ್ದು ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಎಚ್.ಜಿ.ಕುಮಾರ್ ತಿಳಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಸ್ ಡಿಪೋ ಮತ್ತು ನಿಲ್ದಾಣಗಳ ಪರಿವರ್ತನೆ – ಪ್ರಯಾಣಿಕರ ಸೌಕರ್ಯ, ಸುಖಕರವಾದ ಪ್ರವಾಸ ಮತ್ತು ಸುಸ್ಥಿರ ಬಂಡವಾಳ ಸಮಾ ವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ರಯಾಣಿಕರ ಸುರಕ್ಷತೆ ಮತ್ತು ಗುಣಮಟ್ಟದ ಸೇವೆಗೆ ಸಾರಿಗೆ ಬಸ್‌ಗಳು ಅತ್ಯುತಮವಾಗಿವೆ. ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಸರ್ಕಾರಿ ಬಸ್‌ಗಳ ಸೇವೆ ಶೇ.60ರಷ್ಟಿದೆ ಎಂದರು.

ದೇಶದಲ್ಲಿ ಶೇ.65ರಷ್ಟು ಪ್ರಯಾಣಿಕರು ಬಸ್ ಸಂಚಾರವನ್ನೇ ಅವಲಂಬಿಸಿದ್ದಾರೆ. ಅಂತಹ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು. ಸಕಾಲಕ್ಕೆ ಮಾಹಿತಿ ಪೂರೈಕೆ, ನಿಲ್ದಾಣಗಳಲ್ಲಿ ಭದ್ರತೆ, ಸುರಕ್ಷತೆ, ಅಗತ್ಯ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅವರು ಸಲಹೆ ನೀಡಿದರು.  ದೇಶದಲ್ಲಿ ಸುಮಾರು 1.5ರಷ್ಟು ಲಕ್ಷ ಬಸ್‌ಗಳು ಕಾರ್ಯಾಚರಿಸುತ್ತಿವೆ. ಅವುಗಳಲ್ಲಿ ಶೇ.60ರಷ್ಟು ಬಸ್‌ಗಳು ಸಾರಿಗೆ ಇಲಾಖೆಗೆ ಸೇರಿವೆ. ಸುಮಾರು ಮೂರು ಸಾವಿರ ಟರ್ಮಿನಲ್‌ಗಳು ಚಾಲ್ತಿಯಲ್ಲಿವೆ ಎಂದು ಅವರು ಹೇಳಿದರು.  ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರಕುಮಾರ ಕಟಾರಿಯಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಏಕ್‌ರೂಪ್‌ಕೌರ್, ಕೇಂದ್ರ ಸರ್ಕಾರದ ಸಾರಿಗೆ ಇಲಾಖೆಯ ಕಾರ್ಯದರ್ಶಿ ಸಂಜಯ್‌ಮಿತ್ರ, ಸಾರಿಗೆ ಸೇವೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಕೆ.ಟಿ.ರಾಜಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

► Follow us on –  Facebook / Twitter  / Google+

 

Facebook Comments

Sri Raghav

Admin