ದೇಶದ ಉಳಿವಿಗೆ ಪ್ರತಿಯೊಬ್ಬರೂ ಜಾಗೃತರಾಗಿ

ಈ ಸುದ್ದಿಯನ್ನು ಶೇರ್ ಮಾಡಿ

hanur-byke-ra

ಹನೂರು, ಆ.24- ನಮ್ಮ ದೇಶವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ.ಎಂದು ಜಿಲ್ಲಾ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷ ಪೊನ್ನಾಚಿ ಮಹದೇವಸ್ವಾಮಿಯವರು ಹೇಳಿದರು. ಹನೂರು ತಾಲ್ಲೂಕು ಬಿಜೆಪಿ ಯುವ ಮೋರ್ಚಾದಿಂದ ಭಾರತೀಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದಂತಹ ತಿರಂಗಯಾತ್ರೆ ಬೈಕ್‌ರ್ಯಾ ಲಿಯಲ್ಲಿ ಪಾಲ್ಗೊಂಡು ಆರ್.ಎಂ.ಸಿ. ಆವರಣದಲ್ಲಿ ನಡೆದ ಸಮಾರೋಪ ಸಭೆಯಲ್ಲಿ ಮಾತನಾಡಿದರು. ತಾಲ್ಲೂಕು ಅಧ್ಯಕ್ಷರಾದ ಕಣ್ಣೂರು ವೃಷಬೇಂದ್ರಸ್ವಾಮಿರವರ ಅಧ್ಯಕ್ಷತೆಯಲ್ಲಿ ಸೆಸ್ಕಾಂ ಕಚೇರಿ ಮುಂಭಾಗ ಜಮಾವಣೆಗೊಂಡ ಬಿಜೆಪಿ ತಿರಂಗಯಾತ್ರೆಗೆ 350ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಬೈಕ್‌ರ್ಯಾ ಲಿ ನಡೆಸಿದರು.
ಬೋಲೋ ಭಾರತ್ ಮಾತಾಕಿ, ವಂದೇ ಮಾತರಂ, ಜಮ್ಮು ಮತ್ತು ಕಾಶ್ಮೀರಾ….. ಭಾರತ ಮಾತೆಯ ಸಿಂಧೂರ ಎಂದು ಘೋಷಣೆಗಳನ್ನು ಕೂಗುತ್ತಾ ಹನೂರು ಅಜ್ಜೀಪುರ ರಾಮಾಪುರ ಕೌದಳ್ಳಿ ಮತ್ತು ಎಲ್ಲೇಮಾಳ ಮಾರ್ಗವಾಗಿ ಸುಮಾರು 70 ಕಿ.ಮೀ. ಗಳಷ್ಟು ದೂರದ ರ್ಯಾ ಲಿಯಲ್ಲಿ ಭಾಗವಹಿಸಿದ್ದರು.  ಜಿಲ್ಲಾ ಯುವಮೋರ್ಚಾದ ಉಪಾಧ್ಯಕ್ಷರಾದ ನಾಗೇಂದ್ರ, ಸದಸ್ಯರಾದ ಮೂರ್ತಿ.ಜಿ, ಕುಮಾರ್ ಹನೂರು ಬ್ಲಾಕ್ ಅಧ್ಯಕ್ಷ ಮ ಂಗಲದ ರಾಜಶೇಖರ್ ಮುಖಂಡರಾದ ರಾಜೂಗೌಡ ಬಿ.ಕೆ.ಶಿವಕುಮಾರ್ ಮಹಿಳಾ ಮೋರ್ಚಾದ ಅಧ್ಯಕ್ಷೆ ಮೀನಾ ಪಾಳ್ಯ ರಾಚಪ್ಪ ಬಾಬು ನಾಗೇಂದ್ರ ಪ್ರಭು ವೆಂಕಟಮುನಿಶೆಟ್ಟರು ರಾಜಣ್ಣ ಬಂಡಳ್ಳಿ ಶಂಕರಪ್ಪ ಶಿವಕುಮಾರ್ ವಿನೋದ್‌ಕುಮಾರ್ ಮುಂತಾದವರು ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin