ದೇಶದ ಪಾರಂಪರಿಕ ವೃತ್ತಿಯಾಗಿರುವ ಕೈಮಗ್ಗ ಟೈಟಾನ್ ತನೈರಾ ಶೋರೂಂ

ಈ ಸುದ್ದಿಯನ್ನು ಶೇರ್ ಮಾಡಿ

11

ದೇಶದ ಪಾರಂಪರಿಕ ವೃತ್ತಿಯಾಗಿರುವ ಕೈಮಗ್ಗ ಮತ್ತು ಭಾರತೀಯ ನಾರಿಯ ಸಾಂಸ್ಕೃತಿಕ  ಉಡುಗೆಯಾದ ಸೀರೆಯನ್ನು ಈ ಆಧುನಿಕ ಜಗತ್ತಿನಲ್ಲಿ ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಟೈಟಾನ್‍ನ ತನೈರಾ ಮುಂದಾಗಿದೆ.ಇದಕ್ಕಾಗಿ ತನೈರಾದ ತಂಡ ದೇಶಾದ್ಯಂತ ಇರುವ ಪಾರಂಪರಿಕ ಕೈಮಗ್ಗ ನೇಕಾರರನ್ನು ಸಂಪರ್ಕಿಸಿ ಕೈಮಗ್ಗ ಉತ್ಪನ್ನಗಳು ಮತ್ತು ಕರಕುಶಲಯುಕ್ತ ಸೀರೆಗಳ ಸಂಗ್ರಹವನ್ನು ಬೆಂಗಳೂರಿನ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಆರಂಭವಾಗಿರುವ ತನೈರಾ ಶೋರೂಂನಲ್ಲಿ ಪ್ರದರ್ಶಿಸುತ್ತಿದೆ. ಅಸ್ಸಾಂನ ಮುಗಾಸ್, ಚೆಟ್ಟಿನಾಡಿನ ಕಾಟನ್, ಭಗಲ್ಪುರದ ತುಸ್ಸಾರ್, ಗುಜರಾತ್, ಆಂಧ್ರಪ್ರದೇಶ ಮತ್ತು ಒರಿಸ್ಸಾದ ಇಕತ್, ಬಂಗಾಳದ ಜಾಮ್‍ಧಾನಿ, ಲಕ್ನೋದ ಚಿಕಂಕರಿ ಕುಶಲ, ಅತ್ಯಾಕರ್ಷಕವಾದ ಮತ್ತು ಶಾಸ್ತ್ರೀಯವಾದ ಬನಾರಸ್ ರೇಷ್ಮೆ, ಕಾಂಜೀವರಂ, ಪಟಾನ್ ಪಟೋಲಾಸ್ ಮತ್ತು ಮಸ್ಲಿನ್ ಜಮ್‍ಧಾನಿಯಂತಹ ಹೇರ್‍ಲೂಂ ಪೀಸ್‍ನಂತಹ ಆಕರ್ಷಕವಾದ ಸೀರೆಗಳನ್ನು ಐಟಿ ಸಿಟಿಗೆ ತಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin