ದೇಶದ ಭದ್ರತೆಗೆ ತ್ರಿವಳಿ ಕಾರ್ಯ ಸೂತ್ರ ಜಾರಿಗೊಳಿಸಲು : ಜನರಲ್ ರಾವತ್ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Bipin-Rawat--01

ನವದೆಹಲಿ, ಏ.24-ದೇಶದ ಭದ್ರತೆಗೆ ಎದುರಾಗುವ ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಎದುರಿಸಲು ತ್ರಿವಳಿ ಕಾರ್ಯ ವಿಧಾನದ ಸೂತ್ರ ಜಾರಿಗೊಳಿಸಲು ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಲಹೆ ಮಾಡಿದ್ದಾರೆ.   ರಾಷ್ಟ್ರದ ರಕ್ಷಣಾ ವ್ಯವಸ್ಥೆಗೆ ಎದುರಾಗುವ ಗಂಭೀರ ಸವಾಲುಗಳನ್ನು ನಿಭಾಯಿಸುವ ಕುರಿತು ಜ.ರಾವತ್ ನೇತೃತ್ವದಲ್ಲಿ ಕೂಲಂಕಷ ವಿಶ್ಲೇಷಣೆ ನಡೆಸಿದ ಉನ್ನತಾಧಿಕಾರಿಗಳು ಸೇನಾಪಡೆಯ ಆಧುನೀಕರಣಕ್ಕೆ ಒತ್ತು ನೀಡುವಂತೆಯೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ರಾಜಧಾನಿಯಲ್ಲಿ ನಡೆದ ಸೇನಾಪಡೆಯ ಕಮಾಂಡರ್‍ಗಳ ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥರು, ಸಹಭಾಗಿ ಕಾರ್ಯನೀತಿಯಿಂದ ಮಾನವ ಸಂಪನ್ಮೂಲದ ಸದ್ಬಳಕೆ ಸಾಧ್ಯ ಎಂದರು. ಸೇನೆಯ ಸಮರ ಸಾಮಥ್ರ್ಯ ಹೆಚ್ಚಿಸಲು ಮೂರು ಪಡೆಗಳ ಸಹಭಾಗಿತ್ವದ ಜೊತೆಗೆ ನಿರ್ದಿಷ್ಟವಾಗಿ ವಾಯುಪಡೆ ಬಲವರ್ಧನೆ ಅಗತ್ಯ. ಬದಲಾಗುತ್ತಿರುವ ಬಾಹ್ಯ ಮತ್ತು ಆಂತರಿಕ ಸನ್ನಿವೇಶಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಸೇನೆಯ ಶಕ್ತಿ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು.  ಅರ್ಹತೆ ಇದ್ದರೂ ಶೇ.50ಕ್ಕೂ ಹೆಚ್ಚಿನ ಸಿಬ್ಬಂದಿಗೆ ಬಡ್ತಿ ದೊರೆಯದಿರುವ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಯಿತು. ಬಡ್ತಿಯ ವಿಷಯದಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಸಮಾನತೆ ನೀತಿ ಅಳವಡಿಸಿಕೊಳ್ಳಲು ನಿರ್ಧರಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin