ದೇಶದ ಯಾವುದೇ ಭಾಗದಲ್ಲೂ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ : ವಿಎಚ್‍ಪಿ

ಈ ಸುದ್ದಿಯನ್ನು ಶೇರ್ ಮಾಡಿ

VHP--021

ಮೀರತ್, ಮಾ.24-ದೇಶದ ಯಾವುದೇ ಭಾಗದಲ್ಲೂ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿಶ್ವ ಹಿಂದು ಪರಿಷತ್ (ವಿಎಚ್‍ಪಿ) ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಆಯೋಧ್ಯ ರಾಮಮಂದಿರ ವಿವಾದವನ್ನು ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂಕೋಟ್ ಸಲಹೆ ಮಾಡಿರುವ ಬೆನ್ನಲ್ಲೇ ವಿಎಚ್‍ಪಿ ಈ ಪ್ರಚೋದನಕಾರಿ ಹೇಳಿಕೆ ನೀಡಿದೆ.   ದೇಶದ ಯಾವುದೇ ಭಾಗದಲ್ಲೂ ಬಾಬ್ರಿ ಮಸೀದಿ ಕಟ್ಟಲು ಬಿಡುವುದಿಲ್ಲ ಎಂದ ಸ್ಪಷ್ಟಪಡಿಸಿರುವ ವಿಎಚ್‍ಪಿ ಯುವ ವಿಭಾಗ ಭಜರಂಗದಳದ ಉತ್ತರಪ್ರದೇಶ ಸಂಚಾಲಕ ಬಲರಾಜ್ ದಂಗರ್, ಬಾಬರ್ ಮುಸ್ಲಿಮರ ದೇವರಲ್ಲ. ಅವನೊಬ್ಬ ಡಕಾಯಿತಿ. ಬಾರತವನ್ನು ಲೂಟಿ ಮಾಡಿದ್ದಾನೆ. ಅಲ್ಲದೇ ಬಲವಂತವಾಗಿ ಜನರನ್ನು ಇಸ್ಲಾಂ ಧರ್ಮಕ್ಕೆ ಮತಾಂತಗೊಳಿಸಿದವನು. ಆತನ ಮಸೀದಿ ಕಟ್ಟಲು ಇಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin