ದೇಶದ ಶಾಂತಿ ಕಾಪಾಡಲು ಯೋಧರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Pranab

ಚೆನ್ನೈ, ಸೆ.10- ಇಪ್ಪತ್ತೊಂದನೆ ಶತಮಾನವು ತುಂಬಾ ವಿಷಪೂರಿತ ಸ್ವರೂಪದ ಕಲಹಕ್ಕೆ ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಸಮರ್ಥ ಸಶಸ್ತ್ರ ಪಡೆಗಳು ದೇಶದಲ್ಲಿ ಸ್ಥಿರತೆ ಮತ್ತು ಶಾಂತಿ ಕಾಪಾಡುವಂತೆ ಕರೆ ನೀಡಿದ್ದಾರೆ. ಸಾಂಪ್ರದಾಯಿಕ ಗಡಿಗಳ ಆಚೆಗೆ ಭದ್ರತೆಗೆ ದೊಡ್ಡ ಸವಾಲುಗಳು ಎದುರಾಗಿವೆ ಹಾಗೂ ಭಾರೀ ಪ್ರಮಾಣದ ವಲಸೆ ಸೇರಿದಂತೆ ಅಂತರರಾಷ್ಟ್ರೀಯ ವಲಯದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ದೇಶದಲ್ಲಿನ ಅಸ್ಥಿರ ಪ್ರಾಂತ್ಯಗಳು ಹಾಗೂ ಸಾಗರ ತೀರಗಳನ್ನು ರಕ್ಷಿಸುವ ಅಗತ್ಯವಿದೆ ಎಂದು ರಾಷ್ಟ್ರಪತಿ ಹೇಳಿದರು.

ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಸಶಸ್ತ್ರಪಡೆಗಳ ನಿರ್ಗಮನ ಪಥಸಂಚಲನವನ್ನು ವೀಕ್ಷಿಸಿದ ನಂತರ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಲಮಾರ್ಗಗಳ ಮೂಲಕ ಒಡ್ಡಿರುವ ಇಂಥ ಆತಂಕಕಾರಿ ಸವಾಲುಗಳನ್ನು ಯುವಜನತೆ ಸಮರ್ಥವಾಗಿ ಎದುರಿಸಲು ಸನ್ನದ್ಧರಾಗಬೇಕು. ದೇಶ ಸೇವೆಗಾಗಿ ತಮ್ಮ ಜೀವಗಳಿಗೆ ಗಂಡಾಂತರಗಳು ಎದುರಾದರೂ ಕೂಡ ಅದನ್ನು ಲೆಕ್ಕಿಸದೇ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.   ದೇಶದ ಆಂತರಿಕ ಸಂಘರ್ಷ ಪರಿಸ್ಥಿತಿಗಳು, ಮಾನವ ನಿರ್ಮಿತ ಮತ್ತು ನೈಸರ್ಗಿಕ ದುರಂತಗಳನ್ನು ನಿರ್ವಹಣೆ ಮಾಡುವ ಸಶಸ್ತ್ರ ಪಡೆಗಳ ಮೇಲೆ ಭಾರತೀಯರಲ್ಲಿ ನಂಬಿಕೆ ಇದೆ. ಅದೇ ರೀತಿ ಸಮರ್ಥ ಸಶಸ್ತ್ರ ಪಡೆಗಳು ರಾಷ್ಟ್ರದಲ್ಲಿ ಸ್ಥಿರತೆ ಮತ್ತು ಶಾಂತಿ ಕಾಪಾಡುವಂತೆಯೂ ಅವರು ಕರೆ ನೀಡಿದರು.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin