ದೇಶದ ಹಲವೆಡೆ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ 24 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Accident--02

ನವದೆಹಲಿ, ನ.7-ಗುಜರಾತ್, ಪಂಬಾಬ್, ಉತ್ತರಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಿದ ಭೀಕರ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 24ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಜೀಪ್-ಟ್ರಕ್ ಡಿಕ್ಕಿ 14 ಸಾವು: ನಿಂತಿದ್ದ ಟ್ರಕ್ಕೊಂದಕ್ಕೆ ಜೀಪೊಂದು ಅಪ್ಪಳಿಸಿದ ಪರಿಣಾಮ 14 ಮಂದಿ ಮೃತಪಟ್ಟು, 8 ಜನರು ತೀವ್ರ ಗಾಯಗೊಂಡ ಘಟನೆ ಗುಜರಾತ್‍ನ ಖೇಡಾ ಜಿಲ್ಲೆಯ ಅಹಮದಾಬಾದ್-ಇಂದೋರ್ ಹೆದ್ದಾರಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಮಧ್ಯಪ್ರದೇಶದ ಅಲಿರಾಜ್‍ಪುರ್ ಜಿಲ್ಲೆಯ ಸೇಜಾವಾಡ ಗ್ರಾಮದ ಕೂಲಿ ಕಾರ್ಮಿಕರು ಮತ್ತು ಗ್ರಾಮಸ್ಥರು ಜೀಪಿನಲ್ಲಿ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ 3 ಗಂಟೆ ನಸುಕಿನಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಕ್-ಬಸ್ ಡಿಕ್ಕಿಗೆ 6 ಬಲಿ: ಪಂಜಾಬ್‍ ನ ಫಿರೋಜ್‍ಪುರ್ ಜಿಲ್ಲೆಯಲ್ಲಿ ಕರಿ ಕಾಳನ್ ಗ್ರಾಮದಲ್ಲಿ ಇಂದು ಬೆಳಗ್ಗೆ ದಟ್ಟ ಮಂಜು ಕವಿದಿದ್ದ ಕಾರಣ ಟ್ರಕ್ ಮತ್ತು ಪಂಬಾಜ್ ರಸ್ತೆ ಸಾರಿಗೆ ಬಸ್ ನಡುವೆ ಡಿಕ್ಕಿಯಾಗಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟು 20 ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ಸಿನಲ್ಲಿದ್ದ ಬಹುತೇಕ ಪ್ರಯಾಣಿಕರು ಸರ್ಕಾರಿ ನೌಕರರಾಗಿದ್ದು, ಜಲಾಲಬಾದ್‍ಗೆ ತಮ್ಮ ಎಂದಿನ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಟ್ರಕ್ ಅಪ್ಪಳಿಸಿ ಇಬ್ಬರ ಮೃತ್ಯು:

ಅತಿ ವೇಗದ ಟ್ರಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮತ್ತು ಪಾದಚಾರಿಯೊಬ್ಬ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಹಮೀರ್‍ಪುರ್ ನಗರದಲ್ಲಿ ಈ ಬೆಳಗ್ಗೆ ನಡೆದಿದೆ.  ಲಾರಿಗೆ ಇಬ್ಬರ ಬಲಿ: ಅತಿವೇಗದ ಲಾರಿಯೊಂದು ಹಿಂದಿನಿಂದ ಮೂರು ವಾಹನಗಳಿಗೆ ಡಿಕ್ಕಿ ಹೊಡೆದ ಕಾರಣ ಇಬ್ಬರು ಮೃತಪಟ್ಟು, ಕೆಲವರು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ.

Facebook Comments

Sri Raghav

Admin