ದೇಶಾದ್ಯಂತ ಐಟಿ ರೇಡ್ : ಬ್ಯಾಂಕ್‍ಗಳು ಮತ್ತು ಅಧಿಕಾರಿಗಳ ಮನೆಗಳ ಮೇಲೆ ಮಿಂಚಿನ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

IT-Raid-02

ನವದೆಹಲಿ, ನ.26-ಗರಿಷ್ಠ ಮೌಲ್ಯದ ನೋಟು ಅಮಾನ್ಯಗೊಂಡ ಪರಿಸ್ಥಿತಿಯ ದುರ್ಲಾಭ ಪಡೆದು ಕಪ್ಪು ಹಣವನ್ನು ಪರಿವರ್ತಿಸಲು ಪ್ರಭಾವಿಗಳಿಗೆ ಕುಮ್ಮಕ್ಕು ನೀಡುತ್ತಿದ್ದ ದೇಶದ ವಿವಿಧ ಬ್ಯಾಂಕ್‍ಗಳು ಮತ್ತು ಅಧಿಕಾರಿಗಳ ಮನೆಗಳ ಮೇಲೆ ಮಿಂಚಿನ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಗಳು ಭಾರೀ ಪ್ರಮಾಣದ ಅಕ್ರಮಗಳನ್ನು ಪತ್ತೆ ಹಚ್ಚಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ದೊಡ್ಡ ಕುಳಗಳಿಗೆ ಕುಮ್ಮಕ್ಕು ನೀಡಿ ಅವರ ಕಪ್ಪು ಹಣವನ್ನು ಅತ್ಯಂತ ಕ್ಷಿಪ್ರವಾಗಿ ಹೊಸ ಕರೆನ್ಸಿಗಳಿಗೆ ಪರಿವರ್ತಿಸಲು ಸಹಕರಿಸುತ್ತಿದ್ದಾರೆ ಎಂಬ ವ್ಯಾಪಕ ದೂರುಗಳು ಮತ್ತು ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ನಾಲ್ಕು ಮಹಾನಗರಗಳು ಸೇರಿದಂತೆ ವಿವಿಧೆಡೆ ಹಠಾತ್ ದಾಳಿ ನಡೆಸಿ ಕೆಲವರನ್ನು ವಶಕ್ಕೆ ತೆಗೆದುಕೊಂಡು ಕೋಟ್ಯಂತರ ರೂ. ಮೌಲ್ಯದ ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ನಾಲ್ಕು ಮಹಾನಗರಗಳು ಸೇರಿದಂತೆ ವಿವಿಧೆಡೆ ಹಠಾತ್ ದಾಳಿ ನಡೆಸಿ ಕೆಲವರನ್ನು ವಶಕ್ಕೆ ತೆಗೆದುಕೊಂಡು ಕೋಟ್ಯಂತರ ರೂ. ಮೌಲ್ಯದ ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಧಾನಿ ನವದೆಹಲಿಯ ಆಕ್ಸಿಸ್ ಬ್ಯಾಂಕ್‍ನ ಕಾಶ್ಮೀರಿ ಗೇಟ್ ಶಾಖೆ ಮೇಲೆ ನಿನ್ನೆ ರಾತ್ರಿ ದಾಳಿ ನಡೆಸಿದ ಅಧಿಕಾರಿಗಳು ಇಬ್ಬರು ಬ್ಯಾಂಕ್ ಮುಖ್ಯಸ್ಥರನ್ನು ಬಂಧಿಸಿ 3.5 ಕೋಟಿ ರೂ.ಮೌಲ್ಯದ ಹೊಸ ಕರೆನ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ಪ್ರಭಾವಿ ಉದ್ಯಮಿಗಳ ಕಪ್ಪು ಹಣ ವಿನಿಮಯಕ್ಕೆ ಸಾಥ್ ನೀಡಿದ್ದರು ಎಂಬುದು ದೃಢಪಟ್ಟಿದೆ. ಇದೇ ರೀತಿ ಆಕ್ಸಿಸ್ ಬ್ಯಾಂಕ್‍ನ ಇಬ್ಬರು ವ್ಯವಸ್ಥಾಪಕರ ಮನೆಗಳ ಮೇಲೂ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಇಲ್ಲೂ ಕೂಡ ದೊಡ್ಡ ಮಟ್ಟದ ಅಕ್ರಮವನ್ನು ಪತ್ತೆ ಮಾಡಿ ತಪ್ಪಿತಸ್ಥರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಭಾರೀ ಕಮೀಷನ್ ಆಸೆಗಾಗಿ ಈ ಅಧಿಕಾರಿಗಳು ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ. ಇದೇ ರೀತಿ ಮುಂಬೈ, ಚೆನ್ನೈ, ಕೋಲ್ಕತ್ತಾ ನಗರಗಳ ಕೆಲವು ಬ್ಯಾಂಕ್‍ಗಳು ಮತ್ತು ಅಧಿಕಾರಿಗಳ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ನ.8ರಂದು ನೋಟು ರದ್ಧತಿ ನಿರ್ಧಾರದ ನಂತರ ಕಾಳಧನ ವಿನಿಮಯಕ್ಕೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮಗೆ ಬೇಕಾದವರಿಗೆ ಸಹಕಾರ ನೀಡುತ್ತಿದ್ದು, ಸಾರ್ವಜನಿಕರು ಮತ್ತು ಗ್ರಾಹಕರಿಗೆ ತುಂಬಾ ಅನಾನುಕೂಲವಾಗುತ್ತಿದೆ ಎಂಬ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಅಲ್ಲದೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲೂ ಈ ಬಗ್ಗೆ ವಿಸ್ತೃತ ವರದಿಗಳು ಪ್ರಕಟವಾಗಿತ್ತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin