‘ದೇಶಾದ್ಯಂತ ವಿವಿಧ ಬ್ಯಾಂಕ್‍ಗಳಲ್ಲಿ ಠೇವಣಿಯಾಗಿರುವ 4 ಲಕ್ಷ ಕೋಟಿ ನಗದು ಮೇಲೆ ಐಟಿ ಅನುಮಾನದ ಕಣ್ಣು’

ಈ ಸುದ್ದಿಯನ್ನು ಶೇರ್ ಮಾಡಿ

Old-Notes

ನವದೆಹಲಿ,ಡಿ.30- ಕೇಂದ್ರ ಸರ್ಕಾರ ರದ್ದತಿಗೊಳಿಸಿದ ನಂತರ 50 ದಿನಗಳ ಅವಧಿಯಲ್ಲಿ ದೇಶಾದ್ಯಂತ ವಿವಿಧ ಬ್ಯಾಂಕ್‍ಗಳಲ್ಲಿ 14.5 ಲಕ್ಷ ಕೋಟಿ ರೂ.ಗಳು ಜಮೆಯಾಗಿದೆ. ಇದರಲ್ಲಿ 4 ಲಕ್ಷ ಕೋಟಿ ರೂ. ಠೇವಣಿ ಬಗ್ಗೆ ಅನುಮಾನವಿದ್ದು , ಈ ಕುರಿತು ವ್ಯಾಪಕ ತನಿಖೆ ನಡೆಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.  ಕಳೆದ ಐವತ್ತು ದಿನಗಳಿಂದ ದೇಶಾದ್ಯಂತ ರಾಷ್ಟ್ರೀಕೃತ ಮತ್ತು ಪ್ರತಿಷ್ಠಿತ ಖಾಸಗಿ ಬ್ಯಾಂಕ್‍ಗಳ 1.14 ಲಕ್ಷ ಖಾತೆಗಳಲ್ಲಿ ಜಮೆಯಾಗಿರುವ 14.5 ಲಕ್ಷ ಕೋಟಿ ರೂ.ಗಳಲ್ಲಿ 4 ಲಕ್ಷ ಕೋಟಿ ರೂ. ವಹಿವಾಟಿನ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸ ಲಾಗುವುದು. ಈ ದೊಡ್ಡ ಮೊತ್ತದ ಜಮೆ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿದ ನಂತರ ಠೇವಣಿದಾರರು ಮತ್ತು ಅದಕ್ಕೆ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಐಟಿ ಇಲಾಖೆ ಉನ್ನತಾಕಾರಿಗಳು ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin