ದೇಶ ದ್ರೋಹಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ee-sanje

ಚಿಕ್ಕಮಗಳೂರು, ಆ.17- ಬೆಂಗಳೂರಿನಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ರಾಷ್ಟ್ರ ದ್ರೋಹಿಗಳ ವಿರುದ್ದ ಕಠಿಣಕ್ರಮ ಕೈಗೊಳ್ಳುವಂತೆ ಒತ್ತಾಯಿಸಿಎಬಿವಿಪಿ ಪ್ರತಿಭಟನೆ ನಡೆಸಿತು.ನಗರದ ಹನುಮಂತಪ್ಪ ಸರ್ಕಲ್ ಬಳಿ ಸೇರಿದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು, ಬೆಂಗಳೂರಿನ ದಿ ಯೂನೈಟೆಡ್ ಥಿಯೋಲಾಜಿಕಲ್ ಕಾಲೇಜಿನಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಷಿನಲ್ ಸಂಸ್ಥೆಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶ ವಿಭಜಿಸುವ ಘೋಷಣೆಗಳನ್ನು ಕೂಗಿದ್ದು ಮತ್ತು ಉಗ್ರವಾದಿಗಳನ್ನು ಹುತಾತ್ಮನನ್ನಾಗಿಸುವ ಪ್ರಯತ್ನ ನಡೆದಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಗ್ರವಾಗಿ ಖಂಡಿಸುತ್ತದೆ ಎಂದರು.
ಅತ್ಯಂತ ಶಿಸ್ತು ಬದ್ದ ಭಾರತೀಯ ಸೈನ್ಯವನ್ನು ಖಳನಾಯಕನನ್ನಾಗಿಸುವ ದೇಶದ್ರೋಹಿಗಳ ಕುತಂತ್ರವನ್ನು ವಿರೋಧಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಕಾರ್ಯಕರ್ತರನ್ನು ಬಂಧಿಸಿರುವುದು ನಾಚಿಕೆಗೇಡಿನ ಕೃತ್ಯವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.ವಿದೇಶಿ ಧನಸಹಾಯದಿಂದ ಕಾರ್ಯನಿರ್ವಹಿಸುತ್ತಿರುವ ಅಮ್ನೆಷ್ಟಿ ಇಂಟರ್ ನ್ಯಾಷಿನಲ್‍ನಂತಹ ಸರಕಾರೇತರ ಸಂಸ್ಥೆಗಳು ಈ ರೀತಿಯ ಕಾರ್ಯಕ್ರಮಗಳಿಂದ ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದು, ಸಾರ್ವಜನಿಕರಲ್ಲಿ ದೇಶ ವಿರೋಧಿ ಮನಸ್ಥತಿಯನ್ನು ಉತ್ತೇಜಿಸತ್ತಿವೆ, ರಾಜ್ಯ ಸರ್ಕಾರ ಕೂಡಲೇ ಆರೋಪಿ ಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಅಭಾವಿಪದ ನಗರ ಕಾರ್ಯದರ್ಶಿ ಶಶಿ ಆಲ್ದೂರ್, ತಾಲ್ಲೂಕು ಸಂಚಾಲಕ ರಂಜಿತ್, ವಿನೋದ್ ರಾಜ್, ಕೌಶಿಕ್, ಪುನೀತ್, ಪ್ರಜ್ವಲ್ ಮತ್ತಿತರರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin