ದೇಶ ಪ್ರೇಮದ ಚಿತ್ರ ನಿರ್ಮಿಸಲು ಹೊರಟ ಇಮ್ರಾನ್ ಹಶ್ಮಿ

ಈ ಸುದ್ದಿಯನ್ನು ಶೇರ್ ಮಾಡಿ

dgdsdgsgsg

ಬಾರ್ಡರ್, ಎಲ್‍ಒಸಿ ಮುಂತಾದ  ಸೈನಿಕರ ಜೀವನ ಹಿನ್ನೆಲೆಯಿರುವ ಚಿತ್ರಗಳನ್ನು ನೋಡಿದರೆ ಎಲ್ಲರ ಮನಸಲ್ಲೂ ದೇಶ ಪ್ರೇಮ ತಾನೇ ತಾನಾಗಿ ಹುಟ್ಟಿ ಬರುತ್ತದೆ. ಈಗ ಇಂತಹ ದೇಶ ಪ್ರೇಮ ಹುಟ್ಟಿರುವುದು ಯಾರಿಗೆ  ಎಂದು ಕೇಳಿದರೆ ನೀವೇ ಒಮ್ಮೆ ಬೆಚ್ಚಿ ಬೀಳುತ್ತೀರಿ….  ಹೌದು… ಮರ್ಡರ್ ಚಿತ್ರದಿಂದ ಸೀರಿಸ್ ಕಿಸ್ಸರ್ ಖ್ಯಾತಿ ಪಡೆದಿರುವ ನಟ ಇಮ್ರಾನ್‍ಹಶ್ಮಿ ಈಗ ಅಂತಹ ಒಂದು ಸಾಹಸಕ್ಕೆ ಮುಂದಾಗಿದ್ದಾರೆ. ಇವರು  ತಮ್ಮ ಮೊದಲ ನಿರ್ಮಾಣದ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿರುವ ಇಂಡೋ- ಪಾಕ್ ನಡುವೆ ನಡೆದ  ಕಾರ್ಗಿಲ್ ಸಮರದ ಹಿನ್ನೆಲೆಯುಳ್ಳ ಕಥಾವಸ್ತು. ಈ ಚಿತ್ರವನ್ನು ಇಮ್ರಾನ್  ಹಶ್ಮಿ ಅಭಿನಯದ ಅಜರ್ ಚಿತ್ರವನ್ನು ನಿರ್ದೇಶಿಸಿದ ಟೋನಿ ಡಿಸೋಜಾ ನಿರ್ದೇಶಿಸುತ್ತಿದ್ದಾರೆ. ಅಲ್ಲದೆ  ಟೋನಿ ಸಹ ನಿರ್ಮಾಪಕರಾಗಿದ್ದಾರಂತೆ.

ಈ ಚಿತ್ರದ ಚಿತ್ರೀಕರಣವು ಡಿಸೆಂಬರ್ ಅಥವಾ 2017ರ ಜನವರಿಯಲ್ಲಿ  ಆರಂಭಗೊಳ್ಳಲಿದ್ದು  ಡೆಲ್ಲಿ , ಹೈದ್ರಾಬಾದ್ ಅಲ್ಲದೆ ಲಂಡನ್‍ನಲ್ಲಿ ಶೂಟಿಂಗ್ ನಡೆಸಲಿದ್ದಾರಂತೆ. ಅಂತೂ ಕಿಸ್ಸಿಂಗ್ ಕಿಂಗ್  ಇಮ್ರಾನ್ ಹಶ್ಮಿ ಈಗಲಾದರೂ ದೇಶ ಪ್ರೇಮದ ಚಿತ್ರ ನಿರ್ಮಿಸಲು ಮುಂದಾಗಿದ್ದರಲ್ಲ ಅದೇ ಒಂದು ಅಚ್ಚರಿ.

Facebook Comments

Sri Raghav

Admin