ದೇಶ ವಿರೋದಿ ಘೋಷಣೆ ಕೂಗಿದವರ ಬಂಧನಕ್ಕೆ ಆಗ್ರಹ
ಕಡೂರು, ಆ.18- ದೇಶ ವಿರೋಧಿ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಡೂರು ಎಬಿವಿಪಿ, ಭಗತ್ ಸಿಂಗ್ ಯುವ ವೇದಿಕೆ ಪದಾಧಿಕಾರಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರು ಮತ್ತು ತುಮಕೂರಿನ ಕಾಲೇಜಿನಲ್ಲಿ ದೇಶ ವಿರೋಧಿ ಮತ್ತು ಭಾರತದ ಸೇನಾ ವಿರೋಧಿ ಘೋಷಣೆ ಕೂಗಿರುವುದನ್ನು ಖಂಡಿಸಿ, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಿಂದ ಕೆಎಲ್ವಿ ವೃತ್ತದಲ್ಲಿ ದೇಶದ್ರೋಹಿಗಳ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು.
ತಾಲೂಕು ಅಧ್ಯಕ್ಷ ಷಣ್ಮಖ ಮಾತನಾಡಿ, ಪೊ ಲೀಸ್ ಮತ್ತು ಸರ್ಕಾರ ದೇಶದ್ರೋಹಿಗಳ ಮೇಲೆ ಲಾಠಿ ಬೀಸುವ ಬದಲು ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿರುವುದು ಖಂಡಿನೀಯ ಎಂದರು.ದೇಶದ ಪರ ಪ್ರತಿಭಟನೆ ನಡೆಸುತ್ತಿದ್ದಾಗ ಬಂಧಿಸಿರುವ ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಶೀಘ್ರ ತನಿಖೆ ನಡೆಸಿ ಅಂತವರಿಗೆ ಜೈಲಿಗೆ ಕಳುಹಿಸಲಿ ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಮರಿಗುದ್ದಿ ಮನು, ಪ್ರೀತಮ್, ಚೃತ್ರಶ್ರೀ, ಭಗತ್ ಸಿಂಗ್ ವೇದಿಕೆಯ ಶ್ರೀನಿವಾಸ್, ರವಿ ಮತ್ತು ಭರತ್ ಮುಂತಾದವರು ಭಾಗವಹಿಸಿದ್ದರು.
► Follow us on – Facebook / Twitter / Google+