ದೇಸೀ ನಿರ್ಮಿತ ಸೂಪರ್ ಸಾನಿಕ್ ಕ್ಷಿಪಣಿಯ ಯಶಸ್ವೀ ಪರೀಕ್ಷೆ ನಡೆಸಿದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

Missile Test-Fire--014

ಬಾಲಸೂರ್(ಒರಿಸ್ಸಾ), ಮಾ.1- ದೇಶದೊಳಕ್ಕೆ ಬರುವ ಯಾವುದೇ ಶತ್ರು ರಾಷ್ಟ್ರಗಳ ಖಂಡಾಂತರ ಕ್ಷಿಪಣಿಗಳನ್ನು ಪತ್ತೆ ಹಚ್ಚಿ ಧ್ವಂಸ ಮಾಡಬಲ್ಲ ಸಾಮರ್ಥ್ಯದ ದೇಸೀ ನಿರ್ಮಿತ ಸೂಪರ್ ಸಾನಿಕ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಇಂದಿಲ್ಲಿ ಯಶಸ್ವಿಯಾಗಿ ನೆರವೇರಿತು ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ. ಇಂತಹ ಸಾಮಥ್ರ್ಯದ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಇದು ಎರಡನೆಯ ಬಾರಿ ಎಂದು ಮೂಲಗಳು ಹೇಳಿವೆ.  ವೈರಿ ರಾಷ್ಟ್ರಗಳು ಪ್ರಯೋಗಿಸಬಹುದಾಗ ಖಂಡಾಂತರ ಕ್ಷಿಪಣಿಗಳನ್ನು ಪತ್ತೆ ಮಾಡಿ ಇದ್ದಲ್ಲಿಂದಲೇ ಅವುಗಳನ್ನು ಧ್ವಂಸ ಮಾಡುವ ಈ ಸೂಪರ್‍ಸಾನಿಕ್ ಕ್ಷಿಪಣಿಯನ್ನು ಭಾರತವು ದೇಸೀ ತಂತ್ರಜ್ಞಾನಗಳನ್ನು ಬಳಸಿಕೊಂಡೇ ತಯಾರಿಸಿದೆ. ಕ್ಷಿಪಣಿಯನ್ನು ಇಂದು ಬೆಳಗ್ಗೆ 10.10ಕ್ಕೆ ಸರಿಯಾಗಿ ಇಲ್ಲಿನ ಚಂಡೀಪುರ್‍ನಲ್ಲಿರುವ ಸಂಯುಕ್ತ ಪರೀಕ್ಷಾ ಪ್ರದೇಶ ವ್ಯಾಪ್ತಿಯಿಂದ ಯಶಸ್ವಿಯಾಗಿ ಉಡಾಯಿಸಲಾಯಿತು.

ಇಲ್ಲಿನ ಅಬ್ದುಲ್ ಕಲಾಂ ದ್ವೀಪದಿಂದ ಕ್ಷಿಪಣಿ ಗಗನಕ್ಕೆ ಚಿಮ್ಮುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಭಾರತೀಯ ವಿಜ್ಞಾನಿಗಳು ಕುಣಿದು ಕುಪ್ಪಳಿಸಿದರು. ಈ ಮೊದಲು 2016ರ ಮೇ.15ರಂದು ಇದಕ್ಕಿಂತ ಕಡಿಮೆ ಸಾಮಥ್ರ್ಯದ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಗಿತ್ತು ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin