ದೇಹವನ್ನು ಹೊಕ್ಕಿದ್ದ ಸೂಜಿಯನ್ನು 22 ವರ್ಷಗಳ ಬಳಿಕ ಹೊರತೆಗೆ ವೈದ್ಯರು
ಈ ಸುದ್ದಿಯನ್ನು ಶೇರ್ ಮಾಡಿ
ತಿರುವನಂತಪುರ,ನ.20- ವ್ಯಕ್ತಿಯೊಬ್ಬನ ದೇಹವನ್ನು ಹೊಕ್ಕಿದ್ದ ಸೂಜಿಯನ್ನು 22 ವರ್ಷಗಳ ನಂತರ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ. ಕಿರಣ್ ಕುಮಾರ ಎಂಬ 34 ವರ್ಷದ ವ್ಯಕ್ತಿ ಬಾಲಕನಾಗಿದ್ದಾಗ ಆಟದ ವೇಳೆ ಸೂಜಿಯೊಂದು ಆತನ ಪೃಷ್ಠ ಭಾಗವನ್ನು ಹೊಕ್ಕಿತ್ತು. ಆದರೆ ಅದನ್ನು ಆತ ನಿರ್ಲಕ್ಷಿಸಿದ್ದ . ಕಳೆದ ಎರಡು ವಾರಗಳ ಹಿಂದೆ ತೀವ್ರ ನೋವು ಕಾಣಿಸಿಕೊಂಡು ಬೆನ್ನಿನ ಭಾಗ ಊದಿಕೊಂಡಿತ್ತು. ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗಿ ಆತನ ಎಡ ಹಿಂಬದಿಯಲ್ಲಿ ಸೂಜಿ ಇರುವುದು ಸ್ಕ್ಯಾನಿಂಗ್ನಿಂದ ಪತ್ತೆಯಾಯಿತು. ನಂತರ ವೈದ್ಯರ ತಂಡ ಮೂರು ತಾಸುಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಸೂಜಿಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಿರಣ್ಕುಮಾರ್ ಚೇತರಿಸಿಕೊಳ್ಳುತ್ತಿದ್ದಾನೆ.
► Follow us on – Facebook / Twitter / Google+
Facebook Comments