ದೊಡ್ಡ ನೋಟುಗಳು ಭ್ರಷ್ಟಚಾರಕ್ಕೆ ಮೂಲ ಕಾರಣ : ಪ್ರಧಾನಿ ವ್ಯಾಖ್ಯಾನ

ಈ ಸುದ್ದಿಯನ್ನು ಶೇರ್ ಮಾಡಿ

Modi-01

ನವದೆಹಲಿ, ಡಿ.2-ದೊಡ್ಡ ಪ್ರಮಾಣದ ನಗದು ಭ್ರಷ್ಟಾಚಾರ ಮತ್ತು ಕಾಳಧನಕ್ಕೆ ಮೂಲ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ನಗದುರಹಿತ ವಹಿವಾಟು ನಡೆದರೆ ಇಂಥ ಪಿಡುಗುಗಳಿಗೆ ಆಸ್ಪದ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತ 21ನೇ ಶತಮಾನದಲ್ಲಿದೆ. ದೇಶದ ಜನರು ಬದಲಾವಣೆಯತ್ತ ಸಾಗಬೇಕು. ಇಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇರಬಾರದು. ಭ್ರಷ್ಟಾಚಾರ ಮತ್ತು ಲಂಚಾವತಾರದಿಂದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅಲ್ಲದೆ ಇದು ಬಡವರು ಮತ್ತು ಮಧ್ಯಮವರ್ಗದವರ ಕನಸುಗಳನ್ನು ಕಸಿಯುತ್ತವೆ ಎಂದು ಪ್ರಧಾನಿ ಬರೆದಿರುವ ಲೇಖನವೊಂದನ್ನು ಲಿಂಕ್ಡ್‍ಇನ್ ಡಾಟ್ ಕಾಂ ಪೋಸ್ಟ್ ಮಾಡಿದೆ.

ಕಾಳಧನ, ಭ್ರಷ್ಟಾಚಾರ ಮತ್ತು ನಕಲಿ ನೋಟು ಹಾವಳಿ ತಡೆಗಟ್ಟುವ ಉದ್ದೇಶದಿಂದ ತಾವು 500 ರೂ.ಗಳು ಮತ್ತು 1,000 ರೂ.ಗಳ ನೋಟುಗಳನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾಗಿ ಮೋದಿ ಪುನರುಚ್ಚರಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin