ದೊಣ್ಣೆಯಿಂದ ಹೊಡೆದು ಪತಿಯನ್ನು ಕೊಂದಿದ್ದ ಗೃಹಿಣಿ- ಪ್ರಿಯಕರನ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Murdewr-000

ಬೆಂಗಳೂರು, ಆ.19- ಗಂಡನನ್ನು ಕೊಲೆ ಮಾಡಿದ್ದ ಗೃಹಿಣಿ ಹಾಗೂ ಆಕೆಯ ಪ್ರಿಯಕರನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಜಿಎಸ್ ಲೇಔಟ್ ನಿವಾಸಿ ಮಂಜುಳಾಬಾಯಿ (21) ಹಾಗೂ ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಪೆಡಪಲ್ಲಿ ತಾಂಡ್ಯಾ ವಾಸಿ ಆಂಜಿನೇಲು ನಾಯ್ಕ (20)ಅಲಿಯಾಸ್ ಆಂಜಿ ಬಂಧಿತ ಆರೋಪಿಗಳು. ಎಜಿಎಸ್ ಲೇಔಟ್ ಯುಗೇಂದ್ರನಾಯ್ಕ ಅಲಿಯಾಸ್ ಹೀಗೇಂದ್ರನಾಯ್ಕ ಕೊಲೆಯಾಗಿದ್ದ ದುರ್ದೈವಿ.  ಘಟನೆ ವಿವರ: ಮಂಜುಳಾ ಬಾಯಿ ತನ್ನ ಪ್ರಿಯಕರ ಆಂಜಿನೇಲು ನಾಯ್ಕನೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು. ಇದಕ್ಕೆ ಪತಿ ಅಡ್ಡಿಯಾಗುತ್ತಾನೆಂದು ಎಣಿಸಿ ಆ.11ರಂದು ರಾತ್ರಿ ಸುಮಾರು 11.30ರ ಸಮಯದಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿ ಯುಗೇಂದ್ರನಾಯ್ಕನ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಶವದ ಕೈ-ಕಾಲುಗಳನ್ನು ವೇಲ್ನಿಂದ ಕಟ್ಟಿ ಬೆಡ್ಶೀಟ್ನಲ್ಲಿ ಸುತ್ತಿ ಇಟ್ಟಮಡಗು ರಸ್ತೆ ರಾಜಕಾಲುವೆ ಪಕ್ಕ ಗಿಡಗಳ ಪೊದೆಯಲ್ಲಿ ಬಚ್ಚಿಟ್ಟಿದ್ದಳು.
ನಂತರ ತನ್ನ ಪತಿಯನ್ನು ರಾತ್ರಿ ಯಾರೋ ಅಪರಿಚಿತರು ಹೊಡೆದು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಹೇಳಿದ್ದಳು. ಈ ಸಂಬಂಧ ಯುಗೇಂದ್ರನಾಯ್ಕನ ಸೋದರ ಸಂಬಂಧಿ ವಸಂತ ನಾಯ್ಕ ಎಂಬಾತ ತನ್ನ ಚಿಕ್ಕಪ್ಪನ ಮಗ ಯುಗೇಂದ್ರನಾಯ್ಕನನ್ನು ಮೂವರು ಅಪರಿಚಿತರು ಹೊಡೆದು ಅಪಹರಿಸಿರುವುದಾಗಿ ಸುಬ್ರಹ್ಮಣ್ಯಪುರ ಠಾಣೆಗೆ ದೂರು ನೀಡಿದ್ದ.  ದೂರನ್ನಾಧರಿಸಿ ತನಿಖೆ ಕೈಗೊಂಡ ಸುಬ್ರಹ್ಮಣ್ಯಪುರ ಪೊಲೀಸರು ಯುಗೇಂದ್ರನಾಯ್ಕನ ಪತ್ನಿ ಪ್ರಮೀಳಾಬಾಯಿಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್, ದೊಣ್ಣೆ ಮತ್ತು ಚಾಪೆ ವಶಪಡಿಸಿಕೊಳ್ಳಲಾಗಿದೆ. ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರ ಮಾರ್ಗದರ್ಶನದಲ್ಲಿ ಎಸಿಪಿ ಮಂಜುನಾಥ ಚೌದರಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಪರಶುರಾಮಪ್ಪ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin