ದೋಷಪೂರಿತ ಜಾಹಿರಾತು ನೀಡಿದ ಬಾಬಾ ರಾಮದೇವ್’ರ ಪತಂಜಲಿ ಕಂಪನಿಗೆ 11 ಲಕ್ಷ ರೂ. ದಂಡ

ಈ ಸುದ್ದಿಯನ್ನು ಶೇರ್ ಮಾಡಿ

Pathajali-01

ಹರಿದ್ವಾರ,ಡಿ.15-ದೋಷಪೂರಿತ ಮತ್ತು ತಪ್ಪು ದಾರಿಗೆ ಎಳೆಯುವ ಜಾಹಿರಾತು ಹಿನ್ನೆಲೆಯಲ್ಲಿ ಯೋಗಗುರು ರಾಮದೇವ್ ಅವರ ಪತಂಜಲಿ ಕಂಪನಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯವೊಂದು 11 ಲಕ್ಷ ರೂ. ದಂಡ ವಿಧಿಸಿದೆ.  ಹರಿದ್ವಾರದಲ್ಲಿರುವ ಪತಂಜಲಿ ಕಂಪನಿಯು ತನ್ನ ಆರ್ಯುವೇದಿಕ್ ಉತ್ಪನ್ನಗಳ ಬಗ್ಗೆ ತಪ್ಪು ಜಾಹಿರಾತು ನೀಡಿದ್ದರಿಂದ ಸ್ಥಳೀಯ ನ್ಯಾಯಾಲಯವು ದಂಡ ಹಾಕಿದೆ.   ಜಿಲ್ಲಾ ಆಹಾರ ಭದ್ರತೆ ಶಾಖೆಯು 2012ರಲ್ಲ ಸಾಸಿವೆ ಎಣ್ಣೆ, ಉಪ್ಪು , ಪೈನಾಪಲ್‍ಜಾಮ್, ಬೇಸನ್ ಹಾಗೂ ಜೇನುತುಪ್ಪ ಉತ್ಪನ್ನಗಳ ಬಗ್ಗೆ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿತ್ತು. ಪರೀಕ್ಷೆ ವೇಳೆ ಉತ್ಪನ್ನಗಳಲ್ಲಿ ಗುಣಮಟ್ಟದ ರುಚಿ ಅಂಶವಿಲ್ಲದಿರುವುದು ಕಂಡುಬಂದಿತ್ತು. ಬಳಿಕ ಇದರ ವಿರುದ್ಧ ಜಿಲ್ಲಾ ಆಹಾರ ಭದ್ರತೆ ಶಾಖೆಯು ಕೋರ್ಡ್ ಅರ್ಜಿ ಸಲ್ಲಿಸಿತ್ತು.

ಎಡಿಎಂ ಲಲಿತ್ ನಾರಾಯಣ ಮಿಶ್ರ ಪೀಠವು ಇಂದು ಪ್ರಕರಣವನ್ನು ವಿಚಾರಣೆ ನಡೆಸಿ ದಂಡ ವಿಧಿಸಿ ಆದೇಶ ಹೊರಡಿಸಿದೆ.  ದೇಶಾದ್ಯಂತ 5000 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸುತ್ತಿರುವ ಪತಂಜಲಿ ಕಂಪನಿ ಉತ್ಪನ್ನಗಳು ಜನಪ್ರಿಯವಾಗಿರುವ ಸಂದರ್ಭದಲ್ಲೇ ನ್ಯಾಯಾಲಯ ವಿಧಿಸಿರುವ ಈ ದಂಡವು ಸಂಸ್ಥೆಗೆ ಹೊಡೆತ ಬಿದ್ದಂತಾಗಿದೆ.

Eesanje News App

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin