ದೌರ್ಜನ್ಯ ಖಂಡಿಸಿ ಮೌನ ಪ್ರತಿಭಟನೆ
ಪಿರಿಯಾಪಟ್ಟಣ, ಆ.16- ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪಟ್ಟಣದ ಪೊಲೀಸ್ ವೃತ್ತ ನೀರಿಕ್ಷಕರ ಕಚೇರಿಯಿಂದ ತಾಲೂಕು ಕಚೇರಿವರೆಗೆ ದಲಿತ ಸಂಘಟನೆಗಳ ಒಕ್ಕೂಟ ಮೊಂಬತ್ತಿ ಹಿಡಿದು ಮೌನ ಪ್ರತಿಭಟನೆಯನ್ನು ನಡೆಸಿತು.ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ರಾಮು ಐಲಾಪುರ ಮಾತನಾಡಿ, ಹಿಂದುಳಿದ, ದಲಿತ ಅಲ್ಪಸಂಖ್ಯಾತರಿಗೆ ಇಂದೂ ಕೂಡ ಸ್ವಾತಂತ್ರ್ಯ ಸಿಕ್ಕಲ್ಲ. ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ? ದಿನನಿತ್ಯ ರಾಜ್ಯ, ದೇಶದಲ್ಲಿ ಭಷ್ಠಾಚಾರ, ಅತ್ಯಾಚಾರ, ಕೊಲೆ, ಸುಲಿಗೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದರಲ್ಲೂ ದಲಿತರ ಮೇಲೆ ದೌರ್ಜನ್ಯ ನಿತ್ಯ ನಡೆಯುತ್ತಿದ್ದು , ಇದನ್ನು ತಡೆಗಟ್ಟುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ.
ದಲಿತರನ್ನು ಮೇಲೇತ್ತುತ್ತೇವೆಂದು ಬೊಗಳೆಬಿಡುವ ಸರ್ಕಾರಗಳು ದಲಿತರಿಗೆ ಅಧಿಕಾರ ನೀಡದೆ ನಮ್ಮ ಕಣ್ಣೇದುರಿಗೆ ವಂಚಿಸುತ್ತಿದ್ದಾರೆ ಎಂದು ತಿಳಿಸಿದರು.ತಾ.ಪಂ.ಸದಸ್ಯ ಈರಯ್ಯತಾತನಹಳ್ಳಿ, ಮಾಜಿ ಸದಸ್ಯಆವರ್ತಿಸೋಮಶೇಖರ್, ದಸಂಸ ಮುಖಂಡರಾದ, ಸಿ.ಎಸ್.ಜಗದೀಶ್, ಹಿಟ್ನಳ್ಳಿ ದೇವರಾಜ್, ಹೆಚ್.ಎಂ.ಚೆನ್ನಯ್ಯ, ಬಾಳೆಕಟ್ಟೆ ರಾಜಯ್ಯ, ಶಿವಣ್ಣ, ವಸಂತ್, ಸಿ.ಕೆ.ರಾಜಣ್ಣ, ಮಲ್ಲಿಕಾ, ರೇವಣ್ಣ, ರವಿ ಸೇರಿದಂತೆ ಮತ್ತಿತರರು ಹಾಜರಿದ್ದರು.
► Follow us on – Facebook / Twitter / Google+