ದ್ವಿಚಕ್ರ ವಾಹನಗಳ ಹರಾಜು

ಈ ಸುದ್ದಿಯನ್ನು ಶೇರ್ ಮಾಡಿ

beluru

ಬೇಲೂರು, ಆ.11- ಪೊಲೀಸ್  ಠಾಣೆಯಲ್ಲಿ ವಶಪಡಿಸಿಕೊಂಡಿರುವ ಅನುಪಯುಕ್ತವಾದ ಹಾಗೂ ವಾರಸುದಾರರಿಲ್ಲದ 18 ದ್ವಿಚಕ್ರ ವಾಹನಗಳನ್ನು ವೃತ್ತ ನಿರೀಕ್ಷಕ ಲೋಕೇಶ್‍ರವರ ನೇತೃತ್ವದಲ್ಲಿ ಹರಾಜು ನಡೆಸಲಾಯಿತು.ಬೇಲೂರು ಪೊಲೀಸ್  ಠಾಣೆ ಆವರಣದಲ್ಲಿ ವಾಹನಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮಾತನಾಡಿದ ವೃತ್ತ ನಿರೀಕ್ಷಕ ಲೋಕೇಶ್, ಕೆ.ಪಿ.ಆಕ್ಟ್ ಅಡಿಯಲ್ಲಿ ವಿವಿಧ ಪ್ರಕರಣಗಳಲ್ಲಿ ಅನುಪಯುಕ್ತವಾದ ಹಾಗೂ ವಾರಸುದಾರರಿಲ್ಲದ 18 ದ್ವಿಚಕ್ರ ವಾಹನಗಳನ್ನು ನ್ಯಾಯಾಲಯದ ಹಾಗೂ ಇಲಾಖಾ ಮೇಲಾಧಿಕಾರಿಗಳ ಅನುಮತಿ ಪಡೆದು ಬೇಲೂರು ಪೊಲೀಸ್  ಠಾಣಾ ಆವರಣದಲ್ಲಿ ಹರಾಜು ಮಾಡಲಾಗಿದೆ.
ಈ ಹರಾಜಿನಲ್ಲಿ ಒಟ್ಟು 24 ಜನರು ಭಾಗವಹಿಸಿ 18 ದ್ವಿಚಕ್ರ ವಾಹನಗಳನ್ನು 26 ಸಾವಿರದ 500 ರೂ.ಗಳಿಗೆ ಬಹಿರಂಗ ಹರಾಜಿನಲ್ಲಿ ಕೂಗಿದ್ದಾರೆ. ಹರಾಜು ಕೂಗಿದವರಿಂದ ಹರಾಜಿನ ಹಣವನ್ನು ಠಾಣೆಯಲ್ಲಿ ಕಟ್ಟಿಸಿಕೊಂಡು ವಾಹನಗಳನ್ನು ಕೊಡಲಾಗಿದೆ. ಈ ಹರಾಜಿನಲ್ಲಿ ವಾಹನಗಳನ್ನು ಪಡೆದವರು ದ್ವಿಚಕ್ರ ವಾಹನಗಳಲ್ಲಿನ ಬಿಡಿ ಭಾಗಗಳನ್ನು ಉಪಯೋಗಿಸಿ ಕೊಳ್ಳಬಹುದೆ ಹೊರತು, ಆ ವಾಹನಗಳನ್ನು ರೀಪೇರಿ ಮಾಡಿಸಿ ಕೊಂಡು ಓಡಿಸುವಂತಿಲ್ಲ ಎಂದು ತಿಳಿಸಿದರು.ಸಿಬ್ಬಂದಿಗಳಾದ ರಂಗಸ್ವಾಮಿ ಧರ್ಮಯ್ಯ, ನಂದೀಶ್, ನವೀನ್, ಚಂದ್ರು, ಇನ್ನಿತರರಿದ್ದರು.
► Follow us on –  Facebook / Twitter  / Google+

Facebook Comments

Sri Raghav

Admin