ದ್ವಿಚಕ್ರ ವಾಹನ ಉದ್ಯಮದಲ್ಲಿ ಶೇ.7 ರಿಂದ 8ರಷ್ಟು ಬೆಳವಣಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Two-Wheelers--01

ಮುಂಬೈ, ಮಾ.13-ನೋಟು ಅಮಾನೀಕರಣದ ನಡುವೆಯೂ ದ್ವಿಚಕ್ರ ವಾಹನ ಉದ್ಯಮ 2017ರ ಆರ್ಥಿಕ ವರ್ಷದಲ್ಲಿ ಶೇ.7 ರಿಂದ 8ರಷ್ಟು ಬೆಳವಣಿಗೆ ಸಾಧಿಸಿದೆ. ಗರಿಷ್ಠ ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದರಿಂದ ಇದರ ಪರಿಣಾಮ ದ್ವಿಚಕ್ರವಾಹನ ಉದ್ಯಮಕ್ಕೂ ಬೀರಿತ್ತು. ಕಳೆದ ನವೆಂಬರ್‍ನಿಂದ ಜನವರಿವರೆಗೆ ಶೇ.11.3ರಷ್ಟು ವಾಹನಗಳು ಮಾರಾಟ ಕುಸಿದಿದ್ದು, ಉದ್ಯಮದ ಆರ್ಥಿಕ ಬೆಳವಣಿಗೆಯಲ್ಲೂ ಕುಂಠಿತವಾಗಿತ್ತು.
ವಾಹನಗಳು ಹೊರಸೂಸುವ ಹೊಗೆಗೆ ಸಂಬಂಧಿಸಿದಂತೆ ಕೆಲವು ನಿಬಂಧನೆಗಳನ್ನು ರಚಿಸಿದ್ದು, ಇದು ಮುಂದಿನ ಏಪ್ರಿಲ್‍ನಿಂದ ಜಾರಿಯಾಗಲಿದೆ. ದ್ವಿಚಕ್ರ ವಾಹನಗಳ ಉದ್ಯಮ 2017 ಆರ್ಥಿಕ ಸಾಲಿನಲ್ಲಿ ಒಟ್ಟಾರೆ 8.3ರಷ್ಟು ಬೆಳವಣಿಗೆ ಕಂಡಿದ್ದು, ಕಳೆದ 4 ಆರ್ಥಿಕ ವರ್ಷಗಳಿಗಿಂತ ಉತ್ತಮವಾಗಿದೆ ಎಂದು ವರದಿಯೊಂದು ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin