ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

examination-paper

ತುಮಕೂರು,ಮಾ.13- ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತರ ಆಮಿಷದಿಂದ ವಿದ್ಯಾರ್ಥಿಗಳು ಮೋಸ ಹೋಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಪ್ರಶ್ನೆ ಪತ್ರಿಕೆಗಳು ತಮಗೆ ಲಭ್ಯವಾಗಿವೆ ಎಂದು ನಂಬಿಸಿ ಒಂದು ಪ್ರತಿಗೆ 10 ಸಾವಿರ ರೂ. ನಿಗದಿ ಮಾಡಿ ಕೆಲವರಿಗೆ ಜೆರಾಕ್ಸ್ ಪ್ರತಿ ಹಾಗೂ ಕೆಲವರಿಗೆ ವಾಟ್ಸಪ್ ಮೂಲಕ ನಕಲಿ ಪ್ರಶ್ನೆ ಪತ್ರಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಹೆಚ್ಚಿನ ಅಂಕ ಗಳಿಸುವ ಆಸೆಗೆ ವಿದ್ಯಾರ್ಥಿಗಳು ಮೋಸದ ಜಾಲದ ಸುಳಿಗೆ ಸಿಲುಕಿ ಪರೀಕ್ಷೆಗೆ ಕುಳಿತಾಗ ಅಸಲಿ ಪ್ರಶ್ನೆ ಪತ್ರಿಕೆ ನೋಡಿ ತಾವು ಮೋಸ ಹೋಗುತ್ತಿರುವುದನ್ನು ಮನಗಾಣುತ್ತಿದ್ದಾರೆ.

ಕಳೆದ ವರ್ಷ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ರಾಜ್ಯಾದ್ಯಂತ ಸುದ್ದಿಯಾಗಿ ಇಡೀ ಜಾಲವನ್ನು ಭೇದಿಸಿದ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.  ಈ ವರ್ಷ ಯಾವುದೇ ಹಂತದಲ್ಲು ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಿದ್ದು , ಪರೀಕ್ಷೆ ಆರಂಭಕ್ಕೂ ಮುನ್ನವೇ ಕೆಲವು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೂ ಕೆಲವು ವ್ಯಕ್ತಿಗಳು ಒಂದು ಪ್ರತಿಗೆ 10 ಸಾವಿರ ರೂ.ನಂತೆ ಹಣ ಪಡೆದು ವಿದ್ಯಾರ್ಥಿಗಳಿಗೆ ನಕಲಿ ಪ್ರಶ್ನೆ ಪತ್ರಿಕೆ ನೀಡುತ್ತಿದ್ದಾರೆ. ಈ ವಂಚನೆ ತೆರೆಮರೆಯಲ್ಲಿ ನಡೆಯುತ್ತಿದ್ದು, ಮೋಸ ಹೋದವರು ಬಹಿರಂಗವಾಗಿ ಏನೂ ಹೇಳಿಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin