ದ್ವಿಪಕ್ಷೀಯ ಮಾತಕತೆಗೆ ಸ್ವೀಡಿಶ್ ಮಹಾರಾಜನಿಗೆ ಮೋದಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

swedish-king
ಸ್ಕಾಟ್‍ಲ್ಯಾಂಡ್,ಏ.17-ಪ್ರಧಾನಿ ನರೇಂದ್ರ ಮೋದಿಯವರು ಇಂದು ಸ್ವೀಡನ್ ಮಹಾರಾಜ ಕಾರ್ಲ್ ಗುಸ್ತಾಫ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತು ಕತೆಗೆ ಆಹ್ವಾನಿಸಿದ್ದಾರೆ. ನಿನ್ನೆಯಷ್ಟೇ ಸ್ವೀಡನ್‍ಗೆ ಭೆಟಿ ನೀಡಿದ ಪ್ರಧಾನಿ ಮೋದಿಯವರನ್ನು ಏರ್‍ಫೋರ್ಟ್‍ನಲ್ಲಿ ಸ್ವೀಡಿಶ್ ಪ್ರಧಾನ ಮಂತ್ರಿ ಸ್ಟೀಫನ್ ಲಾಫ್‍ವೆನ್ ಸ್ವಾಗತಿಸಿದರು ನಂತರ ಇಬ್ಬರೂ ಒಂದೇ ವಾಹನದಲ್ಲಿ ತೆರಳಿದರು. ಇಬ್ಬರು ಫ್ರಾಧಾನಿಗಳ ಭೇಟಿಯಿಂದ ಉಭಯ ದೇಶಗಳ ಸ್ನೇಹ ಸಂಬಂಧಗಳ ವೃಧ್ದಿಗೆ ಸಹಕಾರಿಯಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‍ಕುಮಾರ್ ಟ್ವೀಟ್ ಮಾಡಿದ್ದಾರೆ.

30 ವರ್ಷಗಳ ನಂತರ ನಾರ್ಧಿಕ್ ದೇಶಗಳಿಗೆ ಭೇಟಿ ನೀಡಿದ ಮೊದಲ ಪ್ರಧಾನಿ ನರೇಂದ್ರಮೋದಿ ಎಂಬ ಕ್ಯಾತಿಗೂ ಒಳಗಾಗಿದ್ದಾರೆ. ಉಭಯ ದೇಶಗಳ ಬಾಂಧವ್ಯಗಳ ಬಗ್ಗೆ ಚರ್ಚಿಸಲು ಮೋದಿರಾಜ ಕಿಂಗ್‍ಕಾರ್ಲ್ ಗುಸ್ತಾಫ ಅವರಿಗೆ ಕರೆ ನೀಡಿದ್ದಾರೆ. ನರೇಂದ್ರಮೋದಿಯವರು ನಾರ್ಧಿಕ್ ರಾಷ್ಟ್ರಗಳಾದ ಫಿನ್‍ಲ್ಯಾಂಡ್, ನಾರ್ವೆ, ಡೆನ್‍ಮಾರ್ಕ್ ಹಾಗೂ ಐಲ್ಯಾಂಡ್‍ಗಳನ್ನೊಳಗೊಂಡ ಮುಖಂಡರ ಸಭೆಯಲ್ಲೂ ಭಾಗವಹಿಸಲಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin