ದ್ವೇಷ ತಿರಸ್ಕರಿಸಿ, ಪ್ರೀತಿ ಪುರಸ್ಕರಿಸಿ : ವಿಶ್ವಕ್ಕೆ ಪೋಪ್ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Pope-Fan

ವ್ಯಾಟಿಕನ್ ಸಿಟಿ, ಜ.2-ದ್ವೇಷವನ್ನು ತಿರಸ್ಕರಿಸುವ ಮೂಲಕ ಮತ್ತು ಸರ್ವರಿಗೂ ಒಳಿತನ್ನು ಮಾಡುವ ಮೂಲಕ 2017ನೇ ಇಸವಿಯನ್ನು ಉತ್ತಮ ವರ್ಷವನ್ನಾಗಿ ರೂಪಿಸಬೇಕೆಂದು ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ವಿಶ್ವಕ್ಕೆ ಕರೆ ನೀಡಿದ್ದಾರೆ.   ಹೊಸ ವರ್ಷದ ಪ್ರಯುಕ್ತ ವ್ಯಾಟಿಕನ್ ಸಿಟಿಯ ಸೇಂಟ್ ಪೀಟರ್ಸ್ ಚೌಕದಲ್ಲಿ ನಿನ್ನೆ ರಾತ್ರಿ 50 ಸಾವಿರಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಪೋಪ್ ಜಗತ್ತಿನಗೆ ಸಂದೇಶ ಸಾರಿದರು. ಪ್ರಪಂಚವನ್ನು ಭೀತಿ, ಆತಂಕ ಮತ್ತು ದಿಗ್ಭ್ರಾಂತಿಗೆ ಈಡು ಮಾಡುತ್ತಿರುವ ಭಯೋತ್ಪಾದನೆಯನ್ನು ದಿಟ್ಟತನದಿಂದ ಎದುರಿಸುತ್ತಿರುವ ದೇಶದ ಮತ್ತು ಜನರಿಗಾಗಿ ತಾವು ಪ್ರಾರ್ಥಿಸುವುದಾಗಿ ಅವರು ಹೇಳಿದರು. ದ್ವೇಷ ಮತ್ತು ಹಿಂಸೆಯನ್ನು ತಿರಸ್ಕರಿಸಿ, ಭಾತೃತ್ವ ಮತ್ತು ಸೌಹಾರ್ದತೆಯನ್ನು ಪುರಸ್ಕರಿಸಿ ಎಂದು ಅವರು ಕರೆ ನೀಡಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin