ದ್ವೇಷ ಮತ್ತು ಹಿಂಸಾಚಾರದಿಂದ ವಿಶ್ವದಲ್ಲಿ ಶಾಂತಿಭಂಗ : ಬುದ್ಧ ಉತ್ಸವದಲ್ಲಿ ಮೋದಿ ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

Modi-In-Srilanka--01

ಕೊಲೊಂಬೊ, ಮೇ 12-ದ್ವೇಷ ಮತ್ತು ಹಿಂಸಾಚಾರ ಪ್ರವೃತ್ತಿಯಿಂದ ವಿಶ್ವದ ಸುಸ್ಥಿರ ಶಾಂತಿಗೆ ದೊಡ್ಡ ಸವಾಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದ್ಧಾರೆ. ದ್ವೀಪರಾಷ್ಟ್ರ ಶ್ರೀಲಂಕಾಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ರಾಜಧಾನಿ ಕೊಲೊಂಬೊದಲ್ಲಿ ಬೌದ್ಧ ಧರ್ಮಿಯರ ಬೃಹತ್ ಉತ್ಸವವಾದ ಅಂತಾರಾಷ್ಟ್ರೀಯ ವೈಶಾಖ ದಿನಾಚರಣೆಯಲ್ಲಿ ಇಂದು ಪಾಲ್ಗೊಂಡು ಮಾತನಾಡಿದರು.  ಏಷ್ಯಾ ಪ್ರಾಂತ್ಯದಲ್ಲಿ ತಲೆದೋರಿರುವ ಭಯೋತ್ಪಾದನೆ ಪಿಡುಗು ವಿನಾಶಕಾರಿ ಭಾವನೆಗಳ ಸ್ಪಷ್ಟ ಗುರುತಾಗಿದೆ ಎಂದು ಪ್ರಧಾನಿ ವಿಷಾದಿಸಿದರು.ಶಾಂತಿಧೂತ ಬುದ್ಧದ ಉದಾತ್ತವಾದ ಅಮೂಲ್ಯ ಸಂದೇಶಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ನಮ್ಮ ಪ್ರಾಂತ್ಯದ್ದು. ಭಾರತ-ಶ್ರೀಲಂಕಾ ನಡುವೆ ಬಹು ಹಿಂದಿನಿಂದಲೂ ಉತ್ತಮ ಸಂಬಂಧವಿದೆ. ಅದು ಮುಂದೆಯೂ ಮುಂದುವರಿಯಲಿದೆ ಎಂದು ಮೋದಿ ಹೇಳಿದರು. ಮುಂದಿನ ಆಗಸ್ಟ್‍ನಿಂದ ಕೊಲೊಂಬೊ ಮತ್ತು ವಾರಾಣಾಸಿ ನಡುವೆ ಏರ್ ಇಂಡಿಯಾ ವಿಮಾನಯಾನ ಸೇವೆ ಆರಂಭವಾಗಲಿದ ಎಂದು ಅವರು ಈ ಸಂದರ್ಭದಲ್ಲಿ ಪ್ರಕಟಿಸಿದರು.
ಎರಡು ವರ್ಷಗಳಲ್ಲಿ ಶ್ರೀಲಂಕಾಗೆ ಎರಡನೇ ಬಾರಿ ಭೇಟಿ ನೀಡಿರುವ ಮೋದಿಯವರನ್ನು ಸಂಪ್ರದಾಯಿಕ ಮೇಳಗಳೊಂದಿಗೆ ಪ್ರಧಾನಮಂತ್ರಿ ರನಿಲ್ ವಿಕ್ರಮಸಿಂಘೆ ಸ್ವಾಗತಿಸಿದರು.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿರುವ ಮೋದಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಲವಾರು ಬೌದ್ಧ ಬಿಕ್ಕುಗಳು (ಸನ್ಯಾಸಿಗಳು) ಮಂತ್ರ ಘೋಷಗಳನ್ನು ಮೊಳಗಿಸುತ್ತಿದ್ದಾಗ ಮೋದಿ ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಕೈಮುಗಿದು ಪ್ರಾರ್ಥನೆ ಸಲ್ಲಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ವಿಕ್ರಮಸಿಂಘೆ, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಕ್ಕೆ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin