ಧರಂಸಿಂಗ್ ನಿವಾಸದಲ್ಲಿ ಮಡುಗಟ್ಟಿದ ಶೋಕ

ಈ ಸುದ್ದಿಯನ್ನು ಶೇರ್ ಮಾಡಿ

Dharma-Singh--02

ಬೆಂಗಳೂರು, ಜು.27- ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಸದಾಶಿವನಗರದಲ್ಲಿರುವ ಅವರ ನಿವಾಸ ಹಾಗೂ ಜೇವರ್ಗಿ ನಿವಾಸದಲ್ಲಿ ಶೋಕ ಮಡುಗಟ್ಟಿತ್ತು. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾವಿಸಿದ ಬೆಂಬಲಿಗರು, ಅಭಿಮಾನಿಗಳು ಕಂಬನಿ ಮಿಡಿದರು.   [ ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ಇನ್ನಿಲ್ಲ ] ಸದಾಶಿವನಗರದ ಅವರ ನಿವಾಸಕ್ಕೆ ಧಾವಿಸಿದ ಅವರ ಕುಟುಂಬದವರು, ಬಂಧುಗಳು ಧರಂಸಿಂಗ್ ಅವರ ನಿಧನದಿಂದ ದುಃಖಿತರಾಗಿದ್ದರು. ಮನೆ ಮುಂದೆ ಸೇರಿದ ಅಪಾರ ಅಭಿಮಾನಿಗಳು, ಬೆಂಬಲಿಗರಲ್ಲಿ ಮೌನ ಆವರಿಸಿತ್ತು. ಕೆಪಿಸಿಸಿ ಕಚೇರಿಯಲ್ಲೂ ಕೂಡ ಧರಂಸಿಂಗ್ ನಿಧನಕ್ಕೆ ಶೋಕ ಆಚರಿಸಲಾಯಿತು. [ ಧರಂಸಿಂಗ್ ನಿಧನದ ಹಿನ್ನೆಲೆಯಲ್ಲಿ ಕಲಬುರಗಿ-ಬೀದರ್‍ನಲ್ಲಿ ನಾಳೆ ರಜೆ ]

ಜೇವರ್ಗಿ, ನೇಲೋಗಿ, ಬೆಂಗಳೂರಿನ ಸದಾಶಿವನಗರದಲ್ಲಿ ಅಪಾರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.
ಜೇವರ್ಗಿಯಲ್ಲಿರುವ ಅವರ ನಿವಾಸದಲ್ಲೂ ಕೂಡ ಶೋಕ ಮಡುಗಟ್ಟಿತ್ತು. [ ಆಪ್ತಮಿತ್ರನ ಅಗಲಿಕೆ ತಾಳಲಾಗದೆ ಬಿಕ್ಕಿಬಿಕ್ಕಿ ಅತ್ತ ಖರ್ಗೆ ] ಜೇವರ್ಗಿ ಕ್ಷೇತ್ರಾದ್ಯಂತ ಅವರ ಅಭಿಮಾನಿಗಳು ಧರಂಸಿಂಗ್ ಅವರ ಭಾವಚಿತ್ರಗಳನ್ನು ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದುದು ಕಂಡುಬಂತು. ನಾಳೆ ಜೇವರ್ಗಿಯಲ್ಲಿ ಧರಂಸಿಂಗ್ ಅವರ ಅಂತ್ಯಕ್ರಿಯೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅದರ ಸಿದ್ಧತೆಯಲ್ಲಿ ತೊಡಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin